- Thursday
- November 21st, 2024
ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ. 101856 ಪುರುಷ ಮತದಾರರು ಹಾಗೂ 104173 ಮಹಿಳಾ ಮತದಾರರು ಸೇರಿ ಒಟ್ಟು 206029 ಮತದಾರರಿದ್ದಾರೆ. ಇಂದು ನಡೆದ ಮತದಾನದಲ್ಲಿ 78.94 ಮಂದಿ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು. ಈ ಭಾರಿ ಮತದಾರರು,ಪಕ್ಷದ ಕಾರ್ಯಕರ್ತರು...
ಬೆಳ್ಳಾರೆಯ ಕೆಪಿಎಸ್ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರಕ್ಕೆ ಪೋಷಕರ ಜೊತೆ ಮತದಾನ ಕೇಂದ್ರಕ್ಕೆ ಬಂದ ಪುಟ್ಪ ಬಾಲಕ ಹೊರಗೆ ಮತದಾನ ಕರ್ತವ್ಯ ದಲ್ಲಿದ್ದ ಯೋಧರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ. ಈ ಪುಟ್ಟ ಬಾಲಕನ ದೇಶಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಸುಳ್ಯ : ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಮತ ಚಲಾಯಿಸಿದರು. ತಂದೆ ಮಾಜಿ ಶಾಸಕ ಕೆ.ಕುಶಲ ಜತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಸಚಿವ ಅಂಗಾರರವರು ದೊಡ್ಡತೋಟ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ತನಗೆ ತಾನೇ ಮತ ನೀಡುವ ಮೂಲಕ ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅಂಗಾರರು ಈ ಸಲ ಬೇರೆಯವರಿಗೆ ಮತ ಚಲಾಯಿಸುತ್ತಿರುವುದು ಈ ಚುನಾವಣೆಯ ವಿಶೇಷ.
ದೇವ ಮತಗಟ್ಟೆಯಲ್ಲಿ ಕೈ ಕೊಟ್ಟ ಮತಯಂತ್ರ.ಈ ಬಾರಿ ಹೊಸದಾಗಿ ಆರಂಭಗೊಂಡ ದೇವಚಳ್ಳ ಗ್ರಾಮದ ದೇವ ಮತಗಟ್ಟೆಯಲ್ಲಿ ಮತದಾನ ಆರಂಭವಾಗಿ ಕೆಲ ಹೊತ್ತಿನಲ್ಲಿ ಮತಯಂತ್ರ ಕೈಕೊಟ್ಟ ಘಟನೆ ನಡೆದಿದೆ. ಬೇರೆ ಮತಯಂತ್ರ ತಂದ ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭಗೊಂಡಿದ್ದು, 1 ಗಂಟೆ ವಿಳಂಬವಾದ ಕಾರಣ ಜನ ಕ್ಯೂ ನಿಲ್ಲುವ ಪರಿಸ್ಥಿತಿ ಉಂಟಾಯಿತು.
ಸುಳ್ಯ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ.ಜೀವ ರಕ್ಷಿಸುವ ರಕ್ತದಾನ ಕ್ಕಿಂತ ಮಿಗಿಲಾದ ದಾನವಿಲ್ಲ, ಹಕ್ಕು ಮತ್ತು ಕರ್ತವ್ಯದ ಮತದಾನಕ್ಕಿಂತ ಮಿಗಿಲಾದ ಸೇವೆಯಿಲ್ಲ :ಪಿ. ಬಿ. ಸುಧಾಕರ್ ರೈ ಸುಳ್ಯ ರೆಡ್ ಕ್ರಾಸ್ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ವರ್ತಕರ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸುಳ್ಯ...