Ad Widget

ಉಬರಡ್ಕ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಎ.26 ರಿಂದ ಮೇ .08 ರವರೆಗೆ ನಡೆಯಿತು.ಎ.26 ರಂದು ಬೆಳಿಗ್ಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಮೇ.02 ರಂದು ಸಂಜೆ ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ,ಬಲ್ಲಾಳರ ಕಾಣಿಕೆ,ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ,ಪ್ರಸಾದ...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಜೆಕ್ಟ್ ಎಕ್ಸ್‌ಪೋ- 2023

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ಎಕ್ಸ್‌ಪೋ-2023 ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಎಂ. ಕೆ. ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಂಡರೆ ಹೊಸ ಅವಕಾಶಗಳು ದೊರೆಯುವುದರೊಂದಿಗೆ...
Ad Widget

ಎಸ್ ಎಸ್ ಎಲ್ ಸಿ ಫಲಿತಾಂಶ : ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100 ಫಲಿತಾಂಶ

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ. ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ .18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,28 ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ ಕಾರ್ಯಕರ್ತರು : ಅರ್ಜಿ ಆಹ್ವಾನ

ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ( ಬಾಳುಗೋಡು, ಸಂಪಾಜೆ, ಅಮರ ಪಡ್ನೂರು ಮತ್ತು ಜಾಲ್ಸೂರು ಗ್ರಾಮಗಳಿಂದ ಈಗಾಗಲೇ ಅರ್ಜಿ ಬಂದಿದೆ) ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ( Multipurpose Artificial insemination worker in rural India ) ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಇಚ್ಛೆಯುಳ್ಳವರು ಕೂಡಲೇ ಪಶು ಆಸ್ಪತ್ರೆ ಸುಳ್ಯದ ಕಚೇರಿಗೆ ತಮ್ಮ ಮಾಹಿತಿಯನ್ನು...

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ರವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಸುಳ್ಯ ಭಾಗದಲ್ಲಿ ನಡೆದ ಅಭಿವೃದ್ಧಿಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಸುಳ್ಯ ಸೇರಿದಂತೆ ಜಿಲ್ಲೆಯ ೮ ಸ್ಥಾನಗಳು ಕೂಡಾ ಬಿಜೆಪಿ ವಶವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.ಸುಳ್ಯ ಬಿಜೆಪಿ ಕಚೇರಿಯಲ್ಲಿ...

💐ಸರಕಾರಿ ಪ್ರೌಢಶಾಲೆ ಎಲಿಮಲೆ 92.72% ಫಲಿತಾಂಶ💐

ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪ್ರೌಢಶಾಲೆ ಎಲಿಮಲೆಯು 92.72% ಫಲಿತಾಂಶ ಪಡೆದಿರುತ್ತದೆ. ಕೀರ್ತನ್.ಡಿ 601, ಕೃತಿ.ಎ 592, ರಾಧಿಕಾ.ವೈ 591, ದಿಶಾ.ಕೆ.ಟಿ 561, ಯಶ್ವಿತಾ.ಕೆ 547, ಪಾತಿಮತ್ ಸನ.ಐ 546, ಶ್ಯಾವ್ಯಶ್ರಿ.ಎಸ್. 546...

💐ಜ್ಯೋತಿ ಪ್ರೌಢಶಾಲೆ ಪೆರಾಜೆ 100% ಫಲಿತಾಂಶ💐

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು ಜ್ಯೋತಿ ಪ್ರೌಢಶಾಲೆ ಪೆರಾಜೆ 100% ಫಲಿತಾಂಶ ಪಡೆದಿರುತ್ತದೆ. ಭಾಗ್ಯಶ್ರೀ.ಕೆ.ಡಿ 578, ನೂತನ್.ವೈ.ಯು 566, ಕೌಶಿಕ್.ಬಿ.ಜೆ 565, ಭಾವನಾ.ಕೆ.ಕೆ 559, ಪವಿತ್ರ.ಎಂ.ಎಸ್ 548, ಋತುಪಂಗ್ ಚರಣ್ 538 ಅಂಕಗಳನ್ನು ಪಡೆದಿರುತ್ತಾರೆ. ವಾರ್ಷಿಕ ಪರೀಕ್ಷೆಗೆ ಒಟ್ಟು 29 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ.
error: Content is protected !!