

ಕೇನ್ಯ ಗ್ರಾಮದ ಕಣ್ಕಲ್ ಬಳಿಯ ಪಳ್ಳ ಎಂಬಲ್ಲಿ ಕುಮಾರಧಾರ ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮೇ.8 ರಂದು ಸಂಜೆ 4 ಗಂಟೆಗೆ ನಡೆದಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳಿಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ರಾತ್ರಿ ಗಂಟೆ ವೇಳೆಗೆ ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಸತೀಶ್ ಅಮ್ಮಣ್ಣಾಯ ರವರು ತನ್ನ ಅಣ್ಣನ ಮನೆಗೆ ಬಂದಿದ್ದ ವೇಳೆ ಮಕ್ಕಳು ಸ್ನಾನಕ್ಕೆಂದು ನದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಂಸಿತಾ (16), ಆವಂತಿಕಾ (11) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಹೆತ್ತವರ ರೋಧನ ಮುಗಿಲುಮುಟ್ಟಿದೆ.