Ad Widget

ಸುಳ್ಯದ ಅಭಿವೃದ್ಧಿಗೆ ಆಪ್ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಬೆಂಬಲಿಸಿ: ಬೆಳ್ಳಾರ್ಕರ್ ಗೆಳೆಯರ ಬಳಗದಿಂದ ಮನವಿ

. . . . . . . . .

ಸುಳ್ಯ ನಗರ ಅಭಿವೃದ್ಧಿಗೊಂಡಿದ್ದರೂ ಗ್ರಾಮೀಣ ಭಾಗದ ಜನರ ಜೀವನ ಇನ್ನೂ ದುಸ್ತರದಲ್ಲಿಯೇ ಇದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ, ಜನಪರ ಕಾಳಜಿಯುಳ್ಳ ಸುಮನಾ ಬೆಳ್ಳಾರ್ಕರ್ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಸುಮನಾ ಬೆಳ್ಳಾರ್ಕರ್ ಅವರ ಗೆಳೆಯರ ಬಳಗ ಮನವಿ ಮಾಡಿಕೊಂಡರು.
ಮೆ.೧ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ ತುಂಕೂರು ಕಳೆದ ೧೫-೨೦ ದಿನಗಳಿಂದ ಸುಳ್ಯ ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದೇವೆ. ನಗರ ಪ್ರದೇಶ ಅಭಿವೃದ್ಧಿ ಆಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್, ಸಾರಿಗೆ, ಸಂಪರ್ಕ, ವಸತಿ ಇಲ್ಲದೆ ಜನರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ, ಹಕ್ಕುಪತ್ರ ಸಿಕ್ಕಿಲ್ಲ. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಸುಮನಾ ಬೆಳ್ಳಾರ್ಕರ್‌ರವರು ಬೆಂಬಲಿಸಿ, ಅವರು ಗೆದ್ದು ಶಾಸಕರಾದರೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿರೀಕ್ಷೆ ಇದೆ. ಜನಪರ ಕಾಳಜಿ ವಹಿಸಲು ಸುಮನಾ ಬೆಳ್ಳಾರ್ಕರ್ ಉತ್ತಮ ಪಕ್ಷವನ್ನೇ ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ೩೦ ವ?ಗಳಲ್ಲಿ ಆಗದ ಅಭಿವೃದ್ಧಿ ಕೆಲಸ ಮುಂದಿನ ಐದು ವ?ಗಳಲ್ಲಿ ಮಾಡಲಿದ್ದಾರೆ. ಎಂಬ ಭರವಸೆ ಇದೆ ಎಂದು ಹೇಳಿದರು. ಭ್ರ?ಚಾರ ಮುಕ್ತ ಜನಪರ ಆಡಳಿತಕ್ಕಾಗಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಸುಮನಾ ಬೆಳ್ಳಾರ್ಕರ್ ಅವರನ್ನು ಗೆಲ್ಲಿಸಬೇಕು. ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ವಿಜಯ ಭಗವಾನ್ ತರೀಕೆರೆ, ಲೋಹಿತ್ ಮದ್ದೂರು, ವೇದರಾಜ ರಾಮನಗರ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading