ಕಾಂಗ್ರೆಸ್ ಪಕ್ಷವು ಮೇ.2ರಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಜರಂಗದಳ ಸಂಘಟನೆ ನಿಷೇಧಿಸುವ ಉಲ್ಲೇಖವನ್ನು ಮಾಡಿದೆ. ಇದನ್ನು ಸುಳ್ಯ ಭಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ ಹಾಗೂ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ ಖಂಡಿಸಿದ್ದಾರೆ.
ಲಿಖಿತ ಹೇಳಿಕೆ ನೀಡಿರುವ ಅವರು ರಾಷ್ಟ್ರ ವಿರೋಧಿ ಶಕ್ತಿಗಳನ್ನು ಓಲೈಸುವ ಭರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಖಂಡಿಸುವುದಲ್ಲದೆ, ಅದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ನಾವು ರಾಷ್ಟ್ರ ಕಾರ್ಯದಲ್ಲಿ, ಗೋಮಾತೆಯ ರಕ್ಷಣೆಯಲ್ಲಿ ಮಾತೆ – ಭಗಿನಿಯರ ರಕ್ಷಣೆ ಗಾಗಿ ಹಗಲಿರುಳು ಸೇವೆ ಮಾಡುತ್ತೇವೆ. ಹಿಂದುತ್ವದ ಕಾರ್ಯವನ್ನು ಮಾಡುವ ರಾಷ್ಟ್ರೀಯ ಸಂಘಟನೆ ಭಜರಂಗದಳ. ಕೊರೊನಾ, ಪ್ರಾಕೃತಿಕ ವಿಕೋಪ ಇತ್ಯಾದಿ ಸಂದರ್ಭದಲ್ಲಿ ವಿಶೇಷವಾಗಿ ಸೇವಾ ಕಾರ್ಯ ಯಾವುದೇ ಮತ – ಪಂಥವನ್ನು ಲೆಕ್ಕಿಸದೇ ಮಾಡಿದ್ದೇವೆ. ಇಂತಹ ಸಾಮಾಜಿಕ ಸಂಘಟನೆಯನ್ನು ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಹೋಲಿಸಿ ನಿಷೇಧಿಸುವ ಉಲ್ಲೇಖ ಕಾಂಗ್ರೆಸ್ ನ ಅವನತಿಗೆ ಮುನ್ನುಡಿಯಾಗಿದೆ. ಇದನ್ನು ಸಮಾಜದ ಎಲ್ಲರೂ ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಮ್ಮ ಸಂಘಟನೆ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.