Ad Widget

ಗುತ್ತಿಗಾರು : ಬಿಜೆಪಿ ಅಭ್ಯರ್ಥಿ ಭಜನಾ ಮಂದಿರಕ್ಕೆ ಭೇಟಿ

ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಇಲ್ಲಿ ನಡೆಯುತ್ತಿರುವ ಭಜನೆ, ಸಂಸ್ಕಾರ, ಸಂಸ್ಕೃತಿ ತರಬೇತಿ ಶಿಬಿರಕ್ಕೆ ಬಿಜೆಪಿ ಅಭ್ಯರ್ಥಿ ಭಾಗೀರಥಿಯವರು ಎ.16 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರು, ಕಲಾ ಪೋಷಕರಾದ ವೇಣುಗೋಪಾಲ ದೇರಪ್ಪಜ್ಜನ ಮನೆ, ಪರಮೇಶ್ವರ ಗೌಡ ಪೈಕ ಮತ್ತಿತರರು ಉಪಸ್ಥಿತರಿದ್ದರು.

ಏ.18 : ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ನಾಮಪತ್ರ ಸಲ್ಲಿಕೆ – ಭವ್ಯ ನರಸಿಂಹಮೂರ್ತಿ ಸಾಥ್

ಸುಳ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಏ. 18 ರಂದು ನಾಮಪತ್ರ ಸಲ್ಲಿಸಲಿದ್ದಾರೆ.‌ ಈ ಸಂದರ್ಭದಲ್ಲಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಆಗಮಿಸಲಿದ್ದು, ಸುಳ್ಯದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.
Ad Widget

ಅರಂತೋಡು : ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರಿಂದ ಪ್ರಚಾರ

ಭಾರತೀಯ ಜನತಾ ಪಾರ್ಟಿ ಸುಳ್ಯ ಇದರ ವತಿಯಿಂದ ಅರಂತೋಡಿನಲ್ಲಿ ಮತಪ್ರಚಾರ ನಡೆಸಲಾಯಿತು.ಕಾರ್ಯಕರ್ತರನ್ನು ಉದ್ದೇಶಿಸಿ ಮಂಡಲ‌ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಮಾತಾನಾಡಿದರು.ಭಾಜಪ ಸರಕಾರ ಬಂದ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ಆಗಿದೆ, ಹಿಂದು ಕಾರ್ಯಕರ್ತರ ಹತ್ಯೆಯಾದಗ ಅದರ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟುವಂತ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದೆ. ಜೊತೆಗೆ ಪಿ ಎಫ್...

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಕರೋಕೆ ಸಂಗೀತ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು . ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಕೃಷ್ಣ ಸೀತಂಗೋಳಿ ಅವರ ಸುಪುತ್ರ ದಿವಂಗತ ಕಿರಣ್ ಕೆ ವಿ ಅವರ 3 ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಕರೋಕೆ ಗಾಯನ ಕಾರ್ಯಕ್ರಮವು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ ವಾರ್ಷಿಕ ಆದಾಯ 123 ಕೋಟಿಗೆ ಏರಿಕೆ

ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿರುವ ಮುಜರಾಯಿ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2022-23 ಸಾಲಿನ ಆರ್ಥಿಕ ವರ್ಷ 123 ಕೋಟಿ ಆದಾಯ ಪಡೆದಿದೆ. 2022ರ ಏಪ್ರಿಲ್ ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲಿ 123,64,49,480,47 ರೂ. ಆದಾಯ ಗಳಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ ಕಾಣಿಕೆ ಡಬ್ಬಿ, ಬಡ್ಡಿ...

ಬೆಳ್ಳಾರೆ: ಸುಳ್ಯ ತಾಲೂಕು ಪಿಗ್ಮಿ ಸಂಘದ ಮಾಸಿಕ ಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಬೆಳ್ಳಾರೆ ಮಾವಂಜಿ ಕಾಂಪ್ಲೆಕ್ಸ್‌ ನ ಹೋಟೆಲ್ ಪಾರಿಜಾತ ಕೆಫೆಯಲ್ಲಿ ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವು ಎ.16 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆಯವರು ದೀಪ ಬೆಳಗಿಸಿ ಶುಭಹಾರೈಸಿದರು.ತಾಲೂಕು ಪಿಗ್ಗಿ ಸಂಗ್ರಾಹಕರ...

ಕಳಂಜ ಗ್ರಾ.ಪಂ. ವ್ಯಾಪ್ತಿಯ ಶೇಣಿ, ಕಜೆಮೂಲೆ ಭಾಗದಲ್ಲಿ ಕುಡಿಯುವ ನೀರಿನ ಅಭಾವ; ತಕ್ಷಣ ಸ್ಪಂದಿಸುವಂತೆ ಗ್ರಾಮಸ್ಥರ ಒತ್ತಾಯ

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆಮೂಲೆ, ಶೇಣಿ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಆ ಭಾಗದ ಜನರು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್ ಮೊರೆ ಹೋಗಿದ್ದಾರೆ. ಕೆಲವು ತಿಂಗಳ ಹಿಂದೆಯೇ ಈ ಭಾಗದ ಸೂರೆಂಗಿ ಎಂಬಲ್ಲಿ ಜೆ.ಜೆ.ಎಮ್ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲಾಗಿದೆಯಾದರೂ, ಇಲ್ಲಿಯವರೆಗೆ ಅದರ ಸಂಪರ್ಕ ವ್ಯವಸ್ಥೆ ಕಲ್ಪಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ....

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ಭೇಟಿ ಮಾಡಿದ ಭಾಗೀರಥಿ ಮುರುಳ್ಯ

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯ ರವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ರವಾರನ್ನು ಭೇಟಿ ಮಾಡಿ ಚುನಾವಣಾ ತಯಾರಿಯ ಬಗ್ಗೆ ಮಾತುಕತೆ ನಡೆಸಿದರು.

ಸದೃಢ ಅರೋಗ್ಯಕ್ಕೆ ಯೋಗ ಅಗತ್ಯ- ಚರಣ್ ದೇರಪ್ಪಜ್ಜನ ಮನೆ

ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಯೋಗ ತರಬೇತಿ ನಡೆಯುತ್ತಿದ್ದು, ಇದೀಗ ಬೇಸಿಗೆ ರಜೆಯ ಅವಧಿಯಲ್ಲಿ ಒಂದು ವಾರಗಳ ಯೋಗ ತರಬೇತಿ ಕಾರ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿಬಿರವನ್ನು ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ನಿ) ಸುಳ್ಯ ಇದರ ನಿಂತಿಕಲ್ಲು ಶಾಖಾ ವ್ಯವಸ್ಥಾಪಕ ಚರಣ್ ದೇರಪ್ಪಜ್ಜನಮನೆ ಉದ್ಘಾಟನೆ ಮಾಡಿ, ಸದೃಢ...

ಪಕ್ಷೇತರ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸುವಂತ್ತಿಲ್ಲ ;
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸೂಚನೆ ನೀಡಿದ ಕಾಂಗ್ರೆಸ್ ಹೈಕಮಾಂಡ್

ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳ ಹಾಗು ಪ್ರಮುಖ ನಾಯಕರ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗೊಂದಲಕ್ಕೆ ಪರಿಹಾರ ಮಾಡಿ, ಒಗ್ಗಟ್ಟಿನಿಂದ ಕೆಲಸ ಮಾಡಿ ಸುಳ್ಯದಲ್ಲಿ ಪಕ್ಷವನ್ನು ಗೆಲ್ಲಿಸಿ ತನ್ನಿ ಎಂದು ಸೂಚನೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸುವಂತ್ತಿಲ್ಲ. ನಮ್ಮ ಸರ್ಕಾರ...
Loading posts...

All posts loaded

No more posts

error: Content is protected !!