Ad Widget

ಬಿಜೆಪಿಯಿಂದ ಅಂಗಾರರು ಸ್ಪರ್ಧಿಸಿದರೆ ಸೋಲು ಫಿಕ್ಸ್ ಹಾಗಾಗಿ ಹೊಸ ಮುಖದ ಪರಿಚಯ : ಎಂ.ವೆಂಕಪ್ಪ ಗೌಡ

ಸುಳ್ಯ ಕ್ಷೇತ್ರದಲ್ಲಿ 29 ವರ್ಷಗಳಿಂದ ಶಾಸಕರಾಗಿದ್ದ ಸಚಿವ ಎಸ್.ಅಂಗಾರರು ಈ ಬಾರಿ ಸ್ಪರ್ಧೆ ಮಾಡಿದರೆ ಸೋಲುವುದು ಖಚಿತ ಎಂದು ಅರಿತ ಬಿಜೆಪಿಗರು ಹೊಸ ಮುಖವನ್ನು ನೀಡಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಅಭಿವೃದ್ಧಿ, ಇಲ್ಲಿಯ ಸಮಸ್ಯೆಯನ್ನು ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಸುಳ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸುಳ್ಯ...

ಬೆಂಗಳೂರಿನ ಹಣದ ಕುಳವನ್ನು ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ಈ ಕ್ಷೇತ್ರಕ್ಕೆ ಹಾಗೂ ಸುಳ್ಯದ ಪರಿಶಿಷ್ಟ ಜಾತಿಗೆ ಮಾಡಿದ ಅವಮಾನ : ದಂಬೆಕೋಡಿ ಟೀಕೆ

ಬೆಂಗಳೂರಿನ ಹಣದ ಕುಳವನ್ನು ಸುಳ್ಯದ ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಈ ಕ್ಷೇತ್ರಕ್ಕೆ ಹಾಗೂ ಸುಳ್ಯದ ದಲಿತರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಧ್ಯಮ ವಕ್ತಾರ ವೆಂಕಟ್ ದಂಬೆಕೋಡಿ ಆರೋಪಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅನೇಕ ವರ್ಷಗಳಿಂದ ಸುಳ್ಯ ಮೀಸಲೂ ಕ್ಷೇತ್ರವಾಗಿದ್ದು ಪರಿಶಿಷ್ಟ ಜಾತಿಯವರನ್ನು ಮೇಲಕ್ಕೆತ್ತುವ ಉದ್ದೇಶದಿಂದ ಹೊಂದಿದೆ‌....
Ad Widget

ಗುತ್ತಿಗಾರು : ಅಮರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಳೆ (ಏ.23) ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.23 ರಂದು ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ.ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಬೆಂಕಿ ನಂದಿಸುವ ಸಲಕರಣೆಗಳನ್ನು ಖರೀದಿಸಲಾಗಿದ್ದು ಬೆಂಕಿ ಅವಘಡಗಳು ಘಟಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿ ಸಹಕಾರ ಬಯಸಿದರೆ ಟ್ರಸ್ಟ್...

ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಸಾನ್ವಿ ಗೆ ಪಿಯುಸಿ ಯಲ್ಲಿ ಶೇ.95.5 ಅಂಕ

ಕೊಲ್ಲಮೊಗ್ರು ಗ್ರಾಮದ ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಸಾನ್ವಿ.ಎಸ್.ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸೈನ್ಸ್ ನಲ್ಲಿ 573 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.ಇವರು ಕುಮಟಾದ ಡಾ| ಎ.ವಿ ಬಾಳಿಗ ಆರ್ಟ್ಸ್ ಮತ್ತು ಸೈನ್ಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಗಿದ್ದು, ದಿ.ದೇವಿದಾಸ್ ಕಜ್ಜೋಡಿ ಅವರ...

“ತೊಡಿಕಾನ ಪುರಧೀಶ ಶ್ರೀ ಮಲ್ಲಿಕಾರ್ಜುನ”ಎಂಬ ಭಕ್ತಿಗೀತೆ ಬಿಡುಗಡೆ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಭಕ್ತಿಗೀತೆಯಾದ 'ತೊಡಿಕಾನ ಪುರಧೀಶ ಶ್ರೀ ಮಲ್ಲಿಕಾರ್ಜುನ' ಎಂಬ ಭಕ್ತಿಗೀತೆಯನ್ನು ತೊಡಿಕಾನ ಜಾತ್ರಾ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಭಕ್ತಿಗೀತೆಯನ್ನು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಯು ಎಂ ಕಿಶೋರ್ ಕುಮಾರ್ ಉಳುವಾರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ ತೊಡಿಕಾನ...

ಮಂಜುಶ್ರೀ ಕೆದಂಬಾಡಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಂಜುಶ್ರೀ ಕೆದಂಬಾಡಿ ೫೯೧ ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಈಕೆ ಉಬರಡ್ಕ ಮಿತ್ತೂರು ಗ್ರಾಮದ ಕೆದಂಬಾಡಿ ತೀರ್ಥರಾಮ ಹಾಗೂ ಸಂಧ್ಯಾ ದಂಪತಿಗಳ ಪುತ್ರಿ.

ಸಂಪಾಜೆ : ಸಂಭ್ರಮದ ಈದ್ ಆಚರಣೆ

ಸಂಪಾಜೆಯ ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸ್ಜಿದ್ ವತಿಯಿಂದ ಈದ್ ನಮಾಜ್ ಮಸೀದಿ ಸಮೀಪದ ಮೈದಾನದಲ್ಲಿ ನಡೆಯಿತು.ಈದ್ ಖುತುಬಾ ಮತ್ತು ನಮಾಜ್ ನೇತೃತ್ವವನ್ನು ಮೌಲವಿ ಸಲ್ಮಾನ್ ಖಾಸಿಮಿ ನಿರ್ವಹಿಸಿದರು.

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿಗೆ ಶೇ. 98.9 ಫಲಿತಾಂಶ

ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿಗೆ 98.9% ಫಲಿತಾಂಶ ಬಂದಿದೆ. ಪರೀಕ್ಷೆ ಗೆ ಹಾಜರಾದ 91 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದ 10 ರಲ್ಲಿ 10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಮನು ಎಸ್. ನಾಯ್ಕ್ 541, ಪ್ರಮೀತಾ 470, ಮೊಹಮ್ಮದ್ ಅನಾಸ್ 468 ಅಂಕ ಪಡೆದಿದ್ದಾರೆ.ಕಾಮರ್ಸ್ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 37...

ಕುಂಬರ್ಚೋಡು : ಸಂಭ್ರಮದ ಈದುಲ್ ಪಿತರ್ ಹಬ್ಬ ಆಚರಣೆ

ಕುಂಬರ್ಚೋಡು ಮೋಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.‌ಮಸೀದಿಯ ಖತಿಬರಾದಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಮಾತನಾಡಿ ರಂಜಾನ್ ಸಹನೆಯ ಮಾಸ ಅದು ಬದುಕಿನಲ್ಲಿ ಅನುಕಂಪ ಮತ್ತು ಸಹಾನುಭೂತಿಯನ್ನು ಜಾಗೃತಗೊಳಿಸುತ್ತದೆ ಪ್ರಾರ್ಥನೆ ಮತ್ತು ನಿವೇದನೆಯ ಮಾಸವು ಹೌದು ತಿಳಿದು ತಿಳಿಯದೆಯೋಘಟಿಸಿದ ಅನೇಕ ಪಾಪ ಕೃತ್ಯಗಳಿಗೆ ಪಶ್ಚತಾಪ ಪಟ್ಟುಪರಮ ಕೃಪಾಲುವಾದ ಅಲ್ಲಾಹನಲ್ಲಿ ಕ್ಷಮೆ ಯಾಚಿಸುವ ಮಾಸವು...

ಬೆಳ್ಳಾರೆ: ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನೆ

ಬೆಳ್ಳಾರೆಯ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಬಹು|ಮುಹಮ್ಮದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನಡೆಯಿತು. ವಿಸ್ವಾಸಿಗಳು ರಂಝಾನಿನಲ್ಲಿ ನಡೆಸಿದ ಸತ್ಕರ್ಮಗಳನ್ನು ಮುಂದುವರಿಸಿಕೊಂಡು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸಲು ತಯಾರಾಗಬೇಕು ಎಂದು ಈದ್ ಸಂದೇಶದಲ್ಲಿ ತಿಳಿಸಿದರು. ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಸ್ಪರ...
Loading posts...

All posts loaded

No more posts

error: Content is protected !!