- Thursday
- November 21st, 2024
ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಮೇದಪ್ಪ ಗೌಡ ಬಿಳಿನೆಲೆ ಇವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಾ.27 ರಿಂದ 30 ರವರೆಗೆ ನಡೆದ 42ನೇ ರಾಷ್ಟ್ರಮಟ್ಟದ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 500 ಮೀಟರ್ ಮತ್ತು 10,000 ಮೀಟರ್ ಓಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕಗಳನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಸೇವಾ ಭಾರತಿ ಹೆಲ್ಪ್ ಲೈನ್ (ರಿ.) ಸುಳ್ಯ ಇದರ ಆಶ್ರಯದಲ್ಲಿ ಏಪ್ರಿಲ್ 02 ರಿಂದ 09 ರವರೆಗೆ ಪೂರ್ವಾಹ್ನ 9:30 ರಿಂದ ಅಪರಾಹ್ನ 4:00 ರವರೆಗೆ ನಿಸರ್ಗ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದ್ದು, ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾರ್ಥನೆ, ಯೋಗ, ಭಜನೆ, ಚಿತ್ರಕಲೆ, ಆಟಗಳು, ಕುಣಿತ ಭಜನೆ, ನಿಸರ್ಗ ವೀಕ್ಷಣೆ,...
ಸುಳ್ಯ ವಿಧಾನ ಸಭಾ ಕ್ಷೇತ್ರದ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬ್ರಹತ್ ಸಮಾವೇಶವನ್ನು ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಎ.09ರಂದು ಆಯೋಜಿಸಲು ಇಂದು ಕಡಬದಲ್ಲಿ ನಡೆದ ಅಭಿಮಾನಿ ಬಳಗದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಂದಕುಮಾರ್ ರವರಿಗೆ ಟಿಕೆಟ್ ಮತ್ತು ಬಿ ಫಾರಂ ನೀಡಬೇಕು. ಸುಳ್ಯದಲ್ಲಿ ಕಾಂಗ್ರೆಸ್ ವಿಜಯ ಗಳಿಸಬೇಕು. ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಂಗ್ರೆಸ್ ಗೆಲುವಿನ...
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕಿಯರಿಗೆ ಏ.2 ರಂದು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆ ಗೃಹರಕ್ಷಕದಳದ ಘಟಕ ಕಛೇರಿಯಲ್ಲಿ ನಡೆಯಿತು. ಕುಮಾರಿ ಲಿಂಗಮ್ಮ ಇವರು 2015 ರಲ್ಲಿ ಗೃಹರಕ್ಷಕದಳದ ಸದಸ್ಯರಾಗಿ ಸೇರ್ಪಡೆಯಾಗಿ, 8 ವರ್ಷಗಳಿಂದ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಹಾಗೂ ಶ್ರೀಮತಿ ಸುನೀತಾ ರೈ, 2017 ರಲ್ಲಿ ಗೃಹರಕ್ಷಕದಳದ ಸದಸ್ಯರಾಗಿ ಸೇರ್ಪಡೆಯಾಗಿ,...
ಶುಭಶ್ರೀ ಮಹಿಳಾ ಮಂಡಲ(ರಿ) ಗಾಂಧಿನಗರ ಇದರ ವತಿಯಿಂದ. ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ಮಾ. 30ರಂದು ನಡೆಯಿತು. ಈ ಕಾರ್ಯಕ್ರಮ ವನ್ನು ಲಯನ್ಸ್ ಅಧ್ಯಕ್ಷೆ ಶ್ರೀಮತಿ ರೂಪಾಶ್ರೀ ಜೆ.ರೈ ಯವರು ಉದ್ಘಾಟಿಸಿ ಮಹಿಳಾ ದಿನಾಚರಣೆ ಯ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ 28...
ಎಣ್ಮೂರು ಗ್ರಾಮದಲ್ಲಿ ಗ್ರಾಮಸ್ಥರು ಪಂಚಾಯತ್ ನಿಂದ ಏನೇ ಕೆಲಸವಾಗಬೇಕಾದರೂ 7 ಕಿ. ಮೀ. ದೂರದಲ್ಲಿರುವ ಎಡಮಂಗಲ ಗ್ರಾಮ ಪಂಚಾಯತ್ ಗೆ ಹೋಗಬೇಕು. ಎಣ್ಮೂರು ಗ್ರಾಮದಲ್ಲಿ ಪುನಃ ಕಾರ್ಯಾಲಯವನ್ನು ತರಬೇಕು ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುತ್ತೇವೆಂದು ಬ್ಯಾನರ್ ಅಳವಡಿಸಲಾಗಿದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ.19 ರವರೆಗೆ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು.ಯಂ.ಕಿಶೋರ್ ಕುಮಾರ್ ಮತ್ತು ವ್ಯ.ಸ.ಸದಸ್ಯರು, ಮಾಜಿ ಅಧ್ಯಕ್ಷರಾದ ಕೇಶವ ಕೊಳಲುಮೂಲೆ, ದೇವಳದ ಮನೇಜರ್ ಆನಂದ ಕಲ್ಲಗದ್ದೆ, ಅರ್ಚಕರು, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಸಂಜೆ 4 ಗಂಟೆಗೆ ಶ್ರೀ ಭಗವತಿ ದೊಡ್ಡಮುಡಿ ಉತ್ಸವ ನಡೆಯುವುದು. ಬೆಳಗ್ಗೆ ಪೊಟ್ಟನ್ ದೈವ ನಡೆಯಿತು. ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ ನಡೆಯುವುದು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯುವುದು.ಸಂಜೆ...
ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.29 ಮತ್ತು 30 ರಂದು ನಡೆದರೆ, ಎ.1ರಂದು ಶ್ರೀ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ ನಡೆಯುವುದು. ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ ನಡೆದು ವಿವಿಧ ಪೂಜಾ ಕಾರ್ಯಗಳು ನಡೆದವು. ಮಾ.30ರಂದು ಬೆಳಗ್ಗೆ...