- Saturday
- November 23rd, 2024
ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಎಂ.ವೆಂಕಪ್ಪ ಗೌಡರನ್ನು ನೇಮಕಗೊಳಿಸಿಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆದೇಶ ಮಾಡಿದ್ದಾರೆ. ಈ ಬಗ್ಗೆ ವೆಂಕಪ್ಪ ಗೌಡರಿಗೆ ಪತ್ರ ಕಳಿಸಿರುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ, ಕ್ಷೇತ್ರದ ಅಭ್ಯರ್ಥಿ, ಬ್ಲಾಕ್ ಅಧ್ಯಕ್ಷರು ಹಾಗೂ ನಾಯಕರುಗಳನ್ನು ಒಳಗೂಡಿಗೊಂಡು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ತೊಡಗಿಸಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗಲು ಸಂದೇಶ ರವಾನಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದು , ಇಂದು ರಾಜ್ಯದಲ್ಲಿ ನೊಂದವರ ದ್ವನಿಯಾಗಿ ಕೆಲಸ ಮಾಡುತ್ತಿದ್ದು, ಆರಂಭದಲ್ಲಿ 15 ಮಂದಿ ಇದ್ದ ಪಕ್ಷದ ಕಾರ್ಯಕರ್ತರು, ಇಂದು 45000 ವಾಗಿದೆ ಈ ನಿಟ್ಟಿನಲ್ಲಿ ಸುಳ್ಯದಲ್ಲೂ ಪಕ್ಷ ತನ್ನ ಕಾರ್ಯ ಚಟುವಟಿಕೆ ಆರಂಭಿಸು ನಿಟ್ಟಿನಲ್ಲಿ ಘಟಕ ರಚಿಸಿದ್ದು, ಘಟಕದ ಅಧ್ಯಕ್ಷರಾಗಿ ಅವಿನಾಶ್ ಕಾರಿಂಜ ಹಾಗೂ...
ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಕಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂದಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ.ಆರ್.ಪಿ.ಎಪ್ ಪಡೆ ಆಗಮಿಸಿದ್ದು ಇಂದು ಸುಳ್ಯದ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್ ನೇತೃತ್ವದಲ್ಲಿ 2 CRPF ಪಡೆ ಹಾಗೂ ಒಂದು...
ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ನೇಮೋತ್ಸವವು ಎ.5 ರಂದು ವಿಜೃಂಭಣೆಯಿಂದ ನಡೆಯಿತು.ಏ.3ರಂದು ಬೆಳಿಗ್ಗೆ ಶ್ರೀ ಮಹಾ ಗಣಪತಿ ಹವನ ನಡೆದು, ರಾತ್ರಿ ಶ್ರೀ ಉಳ್ಳಾಕುಳ ನೇಮ ಮತ್ತು ಕಾಜು ಕುಜುಂಬ ನೇಮ, ಕೈಕಾಣಿಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಎ.4ರಂದು ರಾತ್ರಿ ಇಷ್ಟದೇವತೆ ನೇಮೋತ್ಸವ ನಡೆದು, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಏ....
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕೃಷ್ಣಪ್ಪ ರವರು ಇಂದು ಅರಂತೋಡಿಗೆ ಭೇಟಿ ನೀಡಿ ಆ ಭಾಗದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ, ಎನ್ ಎಸ್ ಯು ಐ ಅಧ್ಯಕ್ಷರಾದ ಕೀರ್ತನ್ ಕೊಡಪಾಲ ಹಾಗೂ ಅರಂತೋಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆದಂಬಾಡಿ ರಾಮಯ್ಯ ಗೌಡ ಅವರ ನೇತೃತ್ವದಲ್ಲಿ ನಡೆದಿದ್ದ ಅಮರಸುಳ್ಯ ಹೋರಾಟದ ವಿಷಯ ಪಠ್ಯದಲ್ಲಿ ಸೇರ್ಪಡೆಗೊಂಡು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ವತಿಯಿಂದ ನಗರದಲ್ಲಿ ಬುಧವಾರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ದಿನಾಚರಣೆ,...
ಸುಬ್ರಹ್ಮಣ್ಯದ ಪ್ರಸಿದ್ಧ ಉಪನದಿ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ಎ.5 ರಂದು ವರದಿಯಾಗಿದೆ. ಒಂದು ಕಡೆ ನೀರಿನ ಹರಿವಿನ ಪ್ರಮಾಣ ಕಡಮೆಯಾಗಿರುವುದು ಹಾಗೂ ನೀರಿಗೆ ಡ್ರೈನೇಜ್ ನೀರು ಸೇರುತ್ತಿರುವುದು ಕಂಡು ಬಂದಿದ್ದು ಇದರಿಂದ ಸಾವಿರಾರು ಜಲಚರಗಳು ಸತ್ತಿರುವುದು ಕಂಡು ಬಂದಿದೆ. ಮೀನುಗಳು ಸತ್ತು ತೆಲುತ್ತಿದೆ. ಇದರಿಂದಾಗಿ ಭಾರಿ ವಾಸನೆಯೂ ಬರುತ್ತಿದೆ. ನದಿಯ...
ಏ.05 ರಂದು ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಮಾಹಿತಿ ಕಾರ್ಯಗಾರ ಏರ್ಪಡಿಸಲಾಗಿತ್ತು.ಮಾಹಿತಿಯನ್ನು ಜೀವನ ಶಿಕ್ಷಣ ತರಬೇತುದಾರರಾದ ಲೋಕೇಶ್ ಪೀರನಮನೆ ನಡೆಸಿಕೊಟ್ಟರು.ಕಂಪ್ಯೂಟರ್ ತರಬೇತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಚಟುವಟಿಕೆಗಳ ಬಗ್ಗೆ ಶ್ರೀ ದುರ್ಗಾ ಕಂಪ್ಯೂಟರ್ ನ ಮಾಲಕಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಮಾಹಿತಿ ನೀಡಿದರು.ಕಂಪ್ಯೂಟರ್ ಶಿಕ್ಷಕಿ ಯಶಸ್ವಿ ಗಿರೀಶ್...
ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಈ ಬಗ್ಗೆ ಅಂತಿಮ ಪೂರ್ವಭಾವಿ ಸಭೆ ಏ. 5ರಂದು ಅಜಪಿಲ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕೋಶಾಧಿಕಾರಿ ವಸಂತ ಪಡ್ಪು, ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಿತಿಯ...
ಮರ್ಕoಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಅಜ್ಜಿಕಲ್ ಭಾಗದಲ್ಲಿ 3 ಮನೆಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿಯವರು ರಾತ್ರೋರಾತ್ರಿ ಮನೆ ಮನೆಗೆ ರಾಜೇಶ್ ಬೇರಿಕೆಯವರ ಪಿಕಪ್ ವಾಹನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮೋಹನ್ ನಾಯ್ಕ್...
Loading posts...
All posts loaded
No more posts