

ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾದ ಪುತ್ತೂರಿನ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿ ರಘುನಾಥ ಜಟ್ಟಿಪಳ್ಳ ಮತ್ತು ಸುಮತಿ ದಂಪತಿಯ ಪುತ್ರ ಕವಿನ್ ಎಸ್ ಆರ್ ಅವರನ್ನು ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಳದ ವತಿಯಿಂದ ಗೌರವಿಸಲಾಯಿತು..ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕ ರಾಮಕೃಷ್ಣ ಭಟ್ , ಶಿಕ್ಷಕಿಯರಾದ ಅಕ್ಷತಾ ಶೆಟ್ಟಿ ಉಷಾ ಕಾನತ್ತಿಲ, ಮಹಿಳಾ ಮಂಡಳದ ಅಧ್ಯಕ್ಷೆ ರೇವತಿ ಗೋಪಾಲ , ಮಹಿಳಾ ಮಂಡಳದ ಗೌರವ ಸಲಹೆಗಾರ ರಾದ ರಘುನಾಥ ಜಟ್ಟಿಪಳ್ಳ, ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ ,ಕಾರ್ಯದರ್ಶಿ ಶೈಲಜಾ ಪಿ ಶೆಟ್ಟಿ ,ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದರು.