ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಸಾಮಾಜಿಕ ಕಳಕಳಿಯತ್ತ ಯುವ ಮನಸ್ಸುಗಳ ಚಿತ್ತ ಎಂಬ ಪರಿಕಲ್ಪನೆಯೊಂದಿಗೆ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಆಶ್ರಯದಲ್ಲಿ 6 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಎಪ್ರಿಲ್ 9ರಂದು ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಹಿರೇಕುಮಾರ್ ಮುಂಡೋಡಿ ನೆರವೇರಿಸಿದರು, ಮುಖ್ಯ ಅತಿಥಿಯಾಗಿ ಪುರುಷೋತ್ತಮ ಪರಮಲೆ ಇವರು ಉಪಸ್ಥಿತರಿದ್ದರು. 6 ತಂಡಗಳ ಮಧ್ಯೆ ನಡೆದ ಪಂದ್ಯಾಟದಲ್ಲಿ ಮೋಹನ್ ಶಿರಾಜೆ ಮಾಲಕತ್ವದ ಶಿರಾಜೆ ಸ್ಟೈಕರ್ಸ್ ಪ್ರಥಮ ಸ್ಥಾನ, ಪ್ರಸನ್ನ ಬಳ್ಳಡ್ಕ ಮಾಲಕತ್ವದ ಅಮ್ಮಾಜಿ ಕ್ರಿಕೆಟರ್ಸ್ ಬಳ್ಳಡ್ಕ ದ್ವಿತೀಯ, ತೃತೀಯ ಮುಂಡೋಡಿ ವಾರಿಯರ್ಸ್ ಮತ್ತು ಚತುರ್ಥ ಎಂ.ಎಂ.ಸಿ. ಸುಬ್ರಹ್ಮಣ್ಯ ತಂಡ ಪಡೆದುಕೊಂಡಿತು. ವೈಯಕ್ತಿಕ ಬಹುಮಾನಗಳಾದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ನಿಶಿತ್ ಮುಂಡೋಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಜತ್ ಮುಂಡೋಡಿ, ಉತ್ತಮ ದಾಂಡಿಗನಾಗಿ ಸವಿನ್ ಹೊಸಮನೆ, ಉತ್ತಮ ಎಸೆತಗಾರ ಪ್ರಶಾಂತ್ ದೇವ, ಉತ್ತಮ ಗೂಟರಕ್ಷಕ ನಿಶಿತ್ ಮುಂಡೋಡಿ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ನಿತೇಶ್ ವಾಡ್ಯಪ್ಪನಮನೆ ಪಡೆದುಕೊಂಡರು. ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಕಂದ್ರಪ್ಪಾಡಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ಸತೀಶ್ ಮೂಕಮಲೆ, ಕಂದ್ರಪ್ಪಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚಂದ್ರಶೇಖರ ಕಂದ್ರಪ್ಪಾಡಿ, ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಗೃಹ ರಕ್ಷಕ ದಳ ಕಡಬ ಘಟಕದ ಸಿಬ್ಬಂದಿ ಶಿವಪ್ರಸಾದ್ ಕುಕ್ಕೆ, ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಕ್ರೀಡಾ ಕಾರ್ಯದರ್ಶಿಯಾದ ರಜತ್ ಮುಂಡೋಡಿ, ಕಾರ್ಯದರ್ಶಿ ಪ್ರಸನ್ನ ಮುಂಡೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಂದ್ರಪ್ಪಾಡಿ ಶಾಲೆಗೆ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ವತಿಯಿಂದ ತೂಕದ ಮಾಪನವನ್ನು ಕೊಡುಗೆಯಾಗಿ ನೀಡಲಾಯಿತು. ವೀಕ್ಷಕ ವಿವರಣೆಗಾರ ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.
- Thursday
- November 21st, 2024