Ad Widget

ಸವಣೂರಿನಲ್ಲಿ ರಶ್ಮಿನಿವಾಸ 30ರ ಸಂಭ್ರಮ

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಠಾಪಕ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈಯವರ ಸವಣೂರಿನ ‘ರಶ್ಮಿನಿವಾಸ’ಕ್ಕೆ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ರಶ್ಮಿನಿವಾಸ 30ರ ಸಂಭ್ರಮ’ ಕಾರ್ಯಕ್ರಮ ಎಪ್ರಿಲ್ 25ರಂದು ಸವಣೂರಿ ರಶ್ಮಿ ನಿವಾಸದಲ್ಲಿ ನಡೆಯಿತು.

. . . . . . . . .


ಪೂರ್ವಾಹ್ನ ಪುರೋಹಿತರಾದ ನರಸಿಂಹಪ್ರಸಾದ್ ಪಾಂಗಣ್ಣಾಯರ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಬಳಗದ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ಪುರೋಹಿತ ನರಸಿಂಹ ಪ್ರಸಾದ್ ಪಾಂಗಣ್ಣಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿದರು. ಕಸ್ತೂರಿ ಕಲಾ ಎಸ್ ರೈ, ಅಶ್ವಿನ್ ಎಲ್ ಶೆಟ್ಟಿ, ರಶ್ಮಿ ಅಶ್ವಿನ್ ಶೆಟ್ಟಿ, ದೀಪಾಂಜಲಿ ಮಹಿಳಾ ಭಜನಾ ತಂಡದ ಇಂದಿರಾ ಬಿ.ಕೆ., ಹರ್ಷಕರುಣಾಕರವರುಗಳು ಉಪಸ್ಥಿತರಿದ್ದರು.

. . . . . . .


ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸವಣೂರು ಸೀತಾರಾಮ ರೈಯವರು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಎಲ್ಲರನ್ನು ಗೌರವದಿಂದ ಕಾಣುವ ರೈಯವರು ಸಹಕಾರ, ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ದಾಸ ಸಂಕೀರ್ತನಾಕಾರರಾದ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಈ ಸಂದರ್ಭ ಗೌರವಾರ್ಪಣೆ ನಡೆಯಿತು. ಸವಣೂರು ಕೆ.ಸೀತಾರಾಮ ರೈ ಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸವಣೂರು ರಶ್ಮಿನಿವಾಸಕ್ಕೆ ೩೦ ವರ್ಷ ತುಂಬಿದ ನೆನಪಿಗಾಗಿ ಪುತ್ತೂರು ರೋಟರಿ ಕ್ಲಬ್‌ನ ಆಶ್ರಯದಲ್ಲಿ ಪ್ರಾರಂಭವಾಗುತ್ತಿರುವ ವಿಶೇಷಚೇತನ ಮಕ್ಕಳ ಶಾಲೆಗೆ ಸವಣೂರು ಸೀತಾರಾಮ ರೈಯವರು ರೂ.25ಸಾವಿರ ಧನಸಹಾಯವನ್ನು ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ರೈ ದೇವಸ್ಯ, ಪದಾಧಿಕಾರಿಗಳಾದ ಸುಜಿತ್ ಕುಮಾರ್ ಶೆಟ್ಟಿ ಹಾಗೂ ವಸಂತ ಜಾಲಾಡಿರವರಿಗೆ ಹಸ್ತಾಂತರಿಸಿದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸವಣೂರು ಸುಂದರ ರೈ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯ, ಸುಳ್ಯ ಲಯನ್ ಕ್ಲಬ್ ಅಧ್ಯಕ್ಷೆ ರೂಪಶ್ರೀ ಜೆ ರೈ ಮತ್ತು ಕಸ್ತೂರಿ ಕಲಾ ಎಸ್ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನ್ ಎಲ್ ಶೆಟ್ಟಿ ಮತ್ತು ರಶ್ಮಿ ಅಶ್ವಿನ್ ಎಲ್ ಶೆಟ್ಟಿ, ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಸುಳ್ಯ ಪುತ್ತೂರಿನ ರೋಟರಿ ಕ್ಲಬ್, ಲಯನ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸೀತಾರಾಮ ರೈಯವರ ಅಭಿಮಾನಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading