

ಕುಂಬರ್ಚೋಡು ಮೋಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.ಮಸೀದಿಯ ಖತಿಬರಾದ
ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಮಾತನಾಡಿ ರಂಜಾನ್ ಸಹನೆಯ ಮಾಸ ಅದು ಬದುಕಿನಲ್ಲಿ ಅನುಕಂಪ ಮತ್ತು ಸಹಾನುಭೂತಿಯನ್ನು ಜಾಗೃತಗೊಳಿಸುತ್ತದೆ ಪ್ರಾರ್ಥನೆ ಮತ್ತು ನಿವೇದನೆಯ ಮಾಸವು ಹೌದು ತಿಳಿದು ತಿಳಿಯದೆಯೋ
ಘಟಿಸಿದ ಅನೇಕ ಪಾಪ ಕೃತ್ಯಗಳಿಗೆ ಪಶ್ಚತಾಪ ಪಟ್ಟು
ಪರಮ ಕೃಪಾಲುವಾದ ಅಲ್ಲಾಹನಲ್ಲಿ ಕ್ಷಮೆ ಯಾಚಿಸುವ ಮಾಸವು ಹೌದು ಈದುಲ್ ಫಿತರ್ ನಂತಹ ಹಬ್ಬಗಳ ಆಚರಣೆಗಳು ನಮ್ಮ ನಮ್ಮನ್ನು ಪರಸ್ಪರ ಗೌರವಿಸಿಕೊಂಡು ಮಾನವೀಯ ಮೌಲ್ಯವುಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಹಾಜಿ ಹನೀಫ್ ಕೆಎಂ ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ
ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ
ಅಬ್ದುಲ್ ಖಾದರ್ ಹಾಜಿ
ಹಾಗೂ ಜಮಾಯತಿನ ಎಲ್ಲಾ ಸದಸ್ಯರು ಪಾಲ್ಗೊಂಡರು