ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.23 ರಂದು ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ.
ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಬೆಂಕಿ ನಂದಿಸುವ ಸಲಕರಣೆಗಳನ್ನು ಖರೀದಿಸಲಾಗಿದ್ದು ಬೆಂಕಿ ಅವಘಡಗಳು ಘಟಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿ ಸಹಕಾರ ಬಯಸಿದರೆ ಟ್ರಸ್ಟ್ ವತಿಯಿಂದ ಸ್ಥಳಕ್ಕೆ ಪರಿಕರಗಳನ್ನ ತಲುಪಿಸಿ ಬೆಂಕಿ ನಂದಿಸುವ ಉದ್ದೇಶ ಇದಾಗಿರುತ್ತದೆ . ಇದರ ಬಳಕೆಗೆ ಈಗಾಗಲೇ ತರಬೇತಿ ನೀಡಲಾಗಿದೆ . ನಾಳೆ ಗಣ್ಯರ ಸಮ್ಮುಖದಲ್ಲಿ ಈ ಯೋಜನೆ ಲೋಕಾರ್ಪಣೆ ಗೊಳ್ಳಲಿದೆ ಹಾಗೂ ಯೋಗ ತರಬೇತಿ ಶಿಬಿರದ ಸಮಾರಂಭ ಪ. ಪಂಗಡ ಸಭಾ ಭವನ ಗುತ್ತಿಗಾರು ಇಲ್ಲಿ ಬೆಳಿಗ್ಗೆ 7ಗಂಟೆ ನಡೆಯಲಿದೆ. ಎಂದು ಸಂಘಟಕರು ತಿಳಿಸಿರುತ್ತಾರೆ.
- Thursday
- November 21st, 2024