ಬೆಂಗಳೂರಿನ ಹಣದ ಕುಳವನ್ನು ಸುಳ್ಯದ ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಈ ಕ್ಷೇತ್ರಕ್ಕೆ ಹಾಗೂ ಸುಳ್ಯದ ದಲಿತರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಧ್ಯಮ ವಕ್ತಾರ ವೆಂಕಟ್ ದಂಬೆಕೋಡಿ ಆರೋಪಿಸಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅನೇಕ ವರ್ಷಗಳಿಂದ ಸುಳ್ಯ ಮೀಸಲೂ ಕ್ಷೇತ್ರವಾಗಿದ್ದು ಪರಿಶಿಷ್ಟ ಜಾತಿಯವರನ್ನು ಮೇಲಕ್ಕೆತ್ತುವ ಉದ್ದೇಶದಿಂದ ಹೊಂದಿದೆ. ಆದರೇ ಕಾಂಗ್ರೆಸ್ ದೂರದ ಅಭ್ಯರ್ಥಿ ಹಾಕುವ ಮೂಲಕ ಇಲ್ಲಿನ ಪರಿಶಿಷ್ಟ ಜಾತಿಯವರಿಗೆ ಅವಮಾನ ಮಾಡಿದೆ. ಬೆಂಗಳೂರಿನ ಹಣ ಕುಳಗಳನ್ನು ಅಭ್ಯರ್ಥಿ ಮಾಡಿ ಮೀಸಲೂ ಕ್ಷೇತ್ರವನ್ನು ಖರೀದಿಸಲು ಹೊರಟಿದೆ. ಸುಳ್ಯದ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜಿ.ಕೃಷ್ಣಪ್ಪ ರವರು ಮಲ್ಲಿಕಾರ್ಜುನ ಖರ್ಗೆಯವರ ಕ್ಯಾಂಡಿಡೇಟ್, ಅದಕ್ಕೆ ಖರ್ಗೆಯವರು ಸುಳ್ಯಕ್ಕೆ ಪ್ರಚಾರಕ್ಕೆ ಬರುವ ಬಗ್ಗೆ ವರದಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ನಿಲುವುಗಳಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಪಂಜದಲ್ಲಿ ದೊಣ್ಣೆ ಹಿಡಿದು ಓಡಿಸಿದ್ದಾರೆ. ಇಲ್ಲಿಯ ನೈಜ ಕಾಂಗ್ರೆಸಿಗರು ಅವರಿಗೆ ಇನ್ನೂ ವಿರೋಧ ಒಡ್ಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿನಯ ಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ಸುನಿಲ್ ಕೇರ್ಪಳ, ಸುಭೋದ್ ರೈ ಮೇನಾಲ ಉಪಸ್ಥಿತರಿದ್ದರು.