ಜೇನು ತೆಗೆಯಲೆಂದು ಮರ ಹತ್ತಿದ್ದ ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಎ.18 ರಂದು ಸಂಪಾಜೆ ಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕರಿಕೆ ಮೂಲದ ವಿಜಯ್ ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದು, ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದ ವಿಜಯ್ ಗಂಭೀರ ಗಾಯಗೊಂಡರೆನ್ನಲಾಗಿದೆ. ಕೂಡಲೇ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಆ ವೇಳೆಗೆ ಮೃತಪ್ಪಟ್ಟನೆಂದೂ ಹೇಳಲಾಗಿದೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
- Friday
- April 4th, 2025