ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿರುವ ಮುಜರಾಯಿ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2022-23 ಸಾಲಿನ ಆರ್ಥಿಕ ವರ್ಷ 123 ಕೋಟಿ ಆದಾಯ ಪಡೆದಿದೆ.
2022ರ ಏಪ್ರಿಲ್ ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲಿ 123,64,49,480,47 ರೂ. ಆದಾಯ ಗಳಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ ಕಾಣಿಕೆ ಡಬ್ಬಿ, ಬಡ್ಡಿ ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಕಡಿಮೆ ಆದಾಯಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಪ್ರಸಕ್ತ ವರ್ಷ ಮತ್ತೆ ಆದಾಯ ಪ್ರಮಾಣ ಹೆಚ್ಚಿದೆ.
2021-22ನೇ ಆರ್ಥಿಕ ವರ್ಷದಲ್ಲಿ ದೇವಳವು 72,73,23,758.07ರೂ, ಆದಾಯ ಗಳಿಸಿತ್ತು. ಕೊರೋನ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಭಂಧವಿದ್ದ ಕಾರಣ 2019 ರಿಂದ 22ರವರೆಗೆ ಆದಾಯ ಇಳಿಮುಖವಾಗಿತ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದ್ದು, ಆದಾಯವೂ ಹೆಚ್ಚಿದೆ.