ಭಾರತೀಯ ಜನತಾ ಪಾರ್ಟಿ ಸುಳ್ಯ ಇದರ ವತಿಯಿಂದ ಅರಂತೋಡಿನಲ್ಲಿ ಮತಪ್ರಚಾರ ನಡೆಸಲಾಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಂಡಲ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಮಾತಾನಾಡಿದರು.ಭಾಜಪ ಸರಕಾರ ಬಂದ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ಆಗಿದೆ, ಹಿಂದು ಕಾರ್ಯಕರ್ತರ ಹತ್ಯೆಯಾದಗ ಅದರ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟುವಂತ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದೆ. ಜೊತೆಗೆ ಪಿ ಎಫ್ ಐ ನಂತಹ ಸಂಘಟನೆಗಳನ್ನು ಬಂದ್ ಮಾಡುವಂತಹ ಮಹತ್ತರ ಕಾರ್ಯಗಳನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡಿದೆ ಎಂದರು.
ಭಾಗೀರಥಿ ಮುರುಳ್ಯ ಮಾತನಾಡಿ ಒಬ್ಬ ತಾಲ್ಲೂಕು ಪಂಚಾಯತ್, ಜಿಲ್ಲಾಪಂಚಾಯತ್ ಸದಸ್ಯೆಯಾಗಿ ನನಗೆ ಜನಸಾಮಾನ್ಯರ ಸೇವೆ ಮಾಡುವ ಅವಕಾಶ ದೊರೆತಿದೆ ಅದರೆ ಈ ಬಾರಿ ನನ್ನನು ವಿಧಾನ ಸಭೆಗೆ ಕಳುಹಿಸುವಂತಹ ಅವಕಾಶ ಬಂದಿದೆ, ಹಾಗಾಗಿ ಕ್ಷೇತ್ರದಿಂದ ಗೆದ್ದು ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಬೇಕಾಗಿರುವುದರಿಂದ ಹೆಚ್ಚಿನ ಮತಗಳಿಂದ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ, ಚುನಾವಣಾ ವಿಶೇಷ ಸಂಪರ್ಕ ಪ್ರಮುಖ್ ಎನ್.ಎ ರಾಮಚಂದ್ರ, ಚುನಾವಣಾ ಪ್ರವಾಸ ಪ್ರಮುಖ್ ಎಸ್,ಎನ್,ಮನ್ಮಥ,
ಸುಳ್ಯ ಮಂಡಲ ಸಾಮಾಜಿಕ ಜಾಲಾತಾಣ ಮತ್ತು ಹೈಟೆಕ್ ಪ್ರಚಾರ ಸಂಚಾಲಕ ಪ್ರಸಾದ್ ಕಾಟೂರು,ಪಕ್ಷದ ಮಹಾಶಕ್ತಿ ಕೇಂದ್ರ ಅಧ್ಯಕ್ಷರು , ಕಾರ್ಯದರ್ಶಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಮಹಿಳಾ ಪ್ರಮುಖಕರು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
- Friday
- November 1st, 2024