ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಯೋಗ ತರಬೇತಿ ನಡೆಯುತ್ತಿದ್ದು, ಇದೀಗ ಬೇಸಿಗೆ ರಜೆಯ ಅವಧಿಯಲ್ಲಿ ಒಂದು ವಾರಗಳ ಯೋಗ ತರಬೇತಿ ಕಾರ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿಬಿರವನ್ನು ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ನಿ) ಸುಳ್ಯ ಇದರ ನಿಂತಿಕಲ್ಲು ಶಾಖಾ ವ್ಯವಸ್ಥಾಪಕ ಚರಣ್ ದೇರಪ್ಪಜ್ಜನಮನೆ ಉದ್ಘಾಟನೆ ಮಾಡಿ, ಸದೃಢ ಅರೋಗ್ಯಕ್ಕಾಗಿ ಪ್ರಸಕ್ತ ದಿನಗಳಲ್ಲಿ ಅರೋಗ್ಯಕ್ಕಾಗಿ ಯೋಗ ಅನಿವಾರ್ಯ ಮತ್ತು ಟ್ರಸ್ಟ್ ನ ಸಾಮಾಜಿಕ ಕಾರ್ಯ ಎಂದೆಂದಿಗೂ ಅಮರವಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ಡಾ. ರಾಜೇಶ್ವರಿ ಮಲಯಾಳ, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ, ಲೋಕೇಶ್ ಕುಚ್ಚಾಲ, ಕಾರ್ತಿಕ್ ದೇವ, ಹರಿಶ್ಚಂದ್ರ ಕುಳ್ಳಂಪಾಡಿ, ಮುಕುಂದ ಹಿರಿಯಡ್ಕ, ಅಭಿಲಾಶ್ ಮೋಟ್ನೂರು, ಯೋಗೀಶ್ ಹೊಸೋಳಿಕೆ,ಜಯರಾಮ್ ಅಡ್ಡನಪಾರೆ, ಸುಧೀರ್ ವಳಲಂಬೆ,ಪ್ರಿತೇಶ್ ಅಚ್ರಪ್ಪಾಡಿ ತೇಜಕುಮಾರ್ ಚೆಮನ್ನೂರ್ ಯತೀಂದ್ರ ಕೋಡ್ತುಗುಳಿ, ರೇವತಿ ಕಡೋಡಿ, ಶ್ರೀಲತಾ ರೋಹಿತಾಕ್ಷ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಯೋಗ ಶಿಕ್ಷಣವನ್ನು ರಾಷ್ಟ್ರಿಯ ಯೋಗ ಪಟು ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ನೀಡುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಯೋಗ ತರಬೇತಿ ಗೆ ಆಸಕ್ತರು ಭಾಗವಹಿಸಿರುವುದು ವಿಶೇಷವಾಗಿದೆ.
- Thursday
- November 21st, 2024