ಎ.09 ರಂದು ಮಂಗಳೂರುನಲ್ಲಿ ನಡೆದ ರಾಷ್ಟ್ರ ಮಟ್ಟದ ಟ್ರಯತ್ಲಾನ್ (ಸ್ವಿಮ್ಮಿಂಗ್, ಸೈಕ್ಲಿOಗ್, ರನ್ನಿಂಗ್ )ಸ್ಪರ್ಧೆಯಲ್ಲಿ ಜಸ್ಮಿತಾ ಕೊಡೆಂಕಿರಿ,ಗ್ಲೀಯೋನ, ಆರಾಧನ ಈ ತಂಡವು ಪ್ರಥಮ ಸ್ಥಾನ ಪಡೆದು ₹ 50,000/ ನಗದು ಬಹುಮಾನವನ್ನು ಪಡೆದುಕೊಂಡಿದೆ.ಜಸ್ಮಿತಾ ಕೊಡೆಂಕಿರಿ ಕೆ. ಎಸ್. ಎಸ್ ಕಾಲೇಜು ಸುಬ್ರಮಣ್ಯ ದ ಹಳೆ ವಿದ್ಯಾರ್ಥಿನಿ ಯಾಗಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗಳನ್ನು ಪಡೆದಿರುವ ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿ.
- Thursday
- November 21st, 2024