ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಏ. 1ರಿಂದ ಏ.10ರವರೆಗೆ ನಡೆದ ವಿಭಿನ್ನ ಮತ್ತು ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಕೂಡಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಏ. 10ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ಮಾತನಾಡಿ ” ಮಕ್ಜಳಿಗೆ ಪೋಷಕರ ಪ್ರೋತ್ಸಾಹ ಸದಾ ಇರಬೇಕು. ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಬೆಂವಲ ನೀಡಬೇಕು. ಅದಕ್ಕೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತದೆ. ಮಕ್ಜಳ ವ್ಯಕ್ತಿತ್ವ ಬೇಸಿಗೆ ಶಿಬಿರದಲ್ಲಿ ವಿಕಸನಗೊಳ್ಳುತ್ತದೆ.” ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಸಂಪನ್ಮೂಲ ವ್ಯಕ್ತಿ ನವೀನ್ ಸಾಣೆಹಳ್ಳಿಯವರು ಮಾತನಾಡಿ ” ಶಿಬಿರಾರ್ಥಿಗಳು ಭವಿಷ್ಯದಲ್ಲಿ ನಟರಾಗಬಹುದು, ನಿರ್ದೇಶಕರಾಗಬಹುದು ಇಲ್ಲವಾದಲ್ಲಿ ಉತ್ತಮ ಪ್ರೇಕ್ಷಕರಾದರೂ ಆಗಬಹುದು. ಅಂತಹ ವ್ಯಕ್ತಿತ್ವ ಸಮಾಜಕ್ಕೆ ಒಂದು ಕೊಡುಗೆ “ಎಂದರು.
ಶಾಲಾ ಪ್ರಾಂಶುಪಾಲರಾದ ದೇಚಮ್ಮ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಹಿತಶ್ರೀ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸುಧಾ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿಬಿರಾರ್ಥಿಗಳು ಜನಹಿತಗೀತೆ, ರಂಗಗೀತೆ, ಪರಿಸರ ಗೀತೆಗಳನ್ನು ಹಾಡಿದರು. ಜನಪದ ನೃತ್ಯಗಳು ಹಾಗೂ ನಾಟಕ’ ಮೃಗ ಮತ್ತು ಸುಂದರಿ’ ಇವುಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಶಿಬಿರದಲ್ಲಿ ತಯಾರಿಸಿದ ಗೂಡುದೀಪ, ಆವೆಮಣ್ಣಿನ ಆಕೃತಿ ರಚನೆ, ತಯಾರಿಸಿದ ಸಾಬೂನಿನ ಪ್ರದರ್ಶನ,
ಮಣ್ಣಿನ ಮಡಕೆ ಪ್ರದರ್ಶನ, ಡೆಕೋಪಾಜ್ ಮುಂತಾದ ಕೌಶಲ್ಯಗಳು ನೋಡುಗರ ಮನಸೆಳೆಯಿತು.