Ad Widget

ಅರಂತೋಡು: ಕೌಶಲ್ಯ ತರಬೇತಿ ಶಿಬಿರ


ನೆಹರು ಮೆಮೋರಿಯಲ್ ಕಾಲೇಜ್ ಕಾಲೇಜು ಸುಳ್ಯ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಜಂಟಿ ಆಶ್ರಯದಲ್ಲಿ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ”ಎಂಬ ಶೀರ್ಷಿಕೆಯಡಿ ಯಲ್ಲಿ ನಾಲ್ಕು ದಿನದ ಕೌಶಲ್ಯ ತರಬೇತಿ ಶಿಬಿರವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ಉದ್ಘಾಟನೆಗೊಂಡಿದೆ .

. . . . .


ಈ ಸಮಾರಂಭದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಬಿಕೆ ಮುಖ್ಯೋಪಾಧ್ಯಾಯರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ವಹಿಸಿ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ) ಸುಳ್ಯ ಇದರ ಅಧ್ಯಕ್ಷರಾದ ಡಾಕ್ಟರ್ ಕೆವಿ ಚಿದಾನಂದ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಶಿಬಿರದಲ್ಲಿ ನಡೆಯುವ ಮೂರು ತರಬೇತಿ ಚಟುವಟಿಕೆಯ ಬಗ್ಗೆ ಪರಿಚಯಿಸಿ ಅವುಗಳಲ್ಲಿ ಆಧುನಿಕತೆ, ಕೌಶಲ್ಯ, ಜ್ಞಾನ ಹಾಗೂ ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಬಾಲಚಂದ್ರ ಗೌಡ ಎಂ,ಶೈಕ್ಷಣಿಕ ಸಲಹೆಗಾರರು ಎನ್ಎಂಸಿ ಸುಳ್ಯ, ಶ್ರೀಯುತ ಗಂಗಾಧರ್ ಕೆಆರ್ ನಿವೃತ್ತ ಪ್ರಾಂಶುಪಾಲರು ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜು ಅರಂತೋಡು, ಪ್ರೊಫೆಸರ್ ರುದ್ರ ಕುಮಾರ್ ಎಂ ಎಂ ಪ್ರಾಂಶುಪಾಲರು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಹಾಗೂ ಮಮತಾ ಕೆ ಸಂಯೋಜಕರು ಆಂತರಿಕ ಗುಣಮಟ್ಟ ಖಾತರಿಕೋಶ ಎನ್ ಎಂ ಸಿ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಕೃಪಾ ಎ ಎನ್ ಮುಖ್ಯಸ್ಥರು ಸಮಾಜಕಾರ್ಯ ವಿಭಾಗ ಏನ್ ಎಂ ಸಿ ಸುಳ್ಯ ಪ್ರಾಸ್ತವಿಕ ಮಾತುಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಸಮಾಜ ಕಾರ್ಯ ಸಂಘದ ಸಂಯೋಜಕೀಯಾಗಿರುವ ಶ್ರೀಮತಿ ಶೋಭಾ ಅತಿಥಿಗಳನ್ನು ವಂದಿಸಿದರು.
ಕೃತಿ ಕೆಎಚ್ ತೃತೀಯ ಬಿ ಎಸ್ ಡಬ್ಲ್ಯೂ ಹಾಗೂ ಜ್ಯೋತಿ ಪ್ರಥಮ ಬಿ ಎಸ್ ಡಬ್ಲ್ಯೂ ಕಾರ್ಯಕ್ರಮವನ್ನು ನಿರೂಪಿಸಿದರು.


ಈ ಕೌಶಲ್ಯ ತರಬೇತಿಯಲ್ಲಿ ಒಟ್ಟು110 ಶಿಬಿರಾರ್ಥಿಗಳು ನೋಂದಾವಣಿಯನ್ನು ಮಾಡಿಕೊಂಡಿರುತ್ತಾರೆ. ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗಳು ನಡೆಯುತ್ತಿದ್ದು, ತರಬೇತಿಯ ಪ್ರಯೋಜನವನ್ನು ಶಿಬಿರಾರ್ಥಿಗಳು ಹಾಗೂ ಸಮಾಜಕಾರ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!