Ad Widget

ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ವತಿಯಿಂದ ಕಿಟ್ ವಿತರಣೆ


ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ವತಿಯಿಂದ ರಂಝಾನ್ ಪ್ರಯುಕ್ತ ಪ್ರತೀ ವರ್ಷದಂತೆ ಈ ವರ್ಷವೂ ಅರ್ಹ ಕುಟುಂಬಗಳನ್ನು ಆರಿಸಿ ಸುಮಾರು 50000 ರೂಪಾಯಿ ವೆಚ್ಚದಲ್ಲಿ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಎಸ್ಸೆಸ್ಸಫ್ ಕಲ್ಲುಗುಂಡಿ ಯೂನಿಟ್ ಹಾಗೂ SჄS ಕಲ್ಲುಗುಂಡಿ ಯೂನಿಟ್ ನಾಯಕರು ಸಹಕಾರವನ್ನು ನೀಡಿದರು. ಕಿಟ್ ವಿತರಣೆ ಮಾಡಲು ಎಸ್ಸೆಸ್ಸಫ್ ಯೂನಿಟ್ ಅಧ್ಯಕ್ಷರಾದ ಅಲಿ, SჄS ಯೂನಿಟ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಸ್ವಾದಿಕ್ ಮಾಸ್ಟರ್, ಹಸೈನಾರ್ ಚಟ್ಟೆಕಲ್ಲು, ರುನೈಝ್ ಕೊಯನಾಡು, ಜಲೀಲ್ ಕಲ್ಲುಗುಂಡಿ, ಲತೀಫ್ ಬಾಲಂಬಿ, ಝಾಕಿರ್ ಕೊಯನಾಡು ರವರು ತೊಡಗಿಸಿ ಕಿಟ್ ಗಳನ್ನು ಅರ್ಹ ಕುಟುಂಬದ ಮನೆಗಳಿಗೆ ತಲುಪಿಸಿ ಕೊಡಲಾಯಿತು. ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಕಳೆದ ಎರಡು ವರ್ಷಗಳಿಂದ ಹಲವಾರು ಸಾಂತ್ವನ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಕಲ್ಲುಗುಂಡಿ ಸಿಟಿ ಟವರ್ ನಲ್ಲಿರುವ ಸುನ್ನೀ ಸೆಂಟರ್ ಕೇಂದ್ರ ವಾಗಿಸಿ ಕಾರ್ಯಾಚರಿಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ಸರ್ವರಿಗೂ ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಸಮಿತಿಯು ಕೃತಜ್ಞತೆಯನ್ನು ಸಲ್ಲಿಸುವುದರೊಂದಿಗೆ ಮುಂದಿನ ಕಾರ್ಯಾಚರಣೆಗೆ ಎಲ್ಲರ ಸಹಕಾರವನ್ನು ಸದಾ ಬಯಸುತ್ತದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading