ಉಬರಡ್ಕ ಮಿತ್ತೂರು ಗ್ರಾಮದ ಅಮೈ – ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.10 ಮತ್ತು ಎ.11 ರಂದು ಭಕ್ತಿ ,ಸಂಭ್ರಮದಿಂದ ನಡೆಯಿತು. ಎ.03 ರಂದು ಬೆಳಿಗ್ಗೆ ಗೊನೆ ಕಡಿಯಲಾಯಿತು.
ಎ.06 ಕ್ಕೆ ಬೆಳಿಗ್ಗೆ ಪ್ರತಿಷ್ಠಾ ವಾರ್ಷಿಕೋತ್ಸವದ ತಂಬಿಲ ಸೇವೆ ನಡೆಯಿತು. ಎ.10 ರಂದು ಬೆಳಿಗ್ಗೆ ಗಣಪತಿ ಹವನ,ಸಂಜೆ ಊರವರ ಕೂಡುವಿಕೆ, ರಾತ್ರಿ ಗಂಟೆ 7.00 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯಲಾಯಿತು. ನಂತರ ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ರಾತ್ರಿ ಕುಲ್ಚಾಟ ನಡೆಯಿತು.
ಎ.11 ರಂದು ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಎ.10 ರಂದು ರಾತ್ರಿ ಶ್ರೀ ವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲ ಬೈಲು ಮತ್ತು ಶ್ರೀ ವರಲಕ್ಷ್ಮೀ ಯುವತಿ ಮಂಡಲ ಅಮೈ ಕೊಡಿಯಾಲಬೈಲು ಇವರಿಂದ ಭಜನೆ ನಡೆಯಿತು.
ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.
ಸಾಂಸ್ಕ್ರತಿಕ ಸಂಭ್ರಮ ನಡೆಯಿತು. ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಕೊಡಿಯಾಲಬೈಲು ಇವರಿಂದ ಹಾಗೂ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ,ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಭಕ್ತಿಗೀತೆ,ಭಾವಗೀತೆ,ಜನಪದಗೀತೆ,ದಾಸರ ಪದ,ತತ್ವಪದಗಳ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಮಿತಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪಿ.ಶಶಿಧರ ಶೆಟ್ಟಿ,ಅಧ್ಯಕ್ಷ ರಾಮಕೃಷ್ಣ ಅಮೈ, ಕಾರ್ಯದರ್ಶಿ ಪ್ರಭಾಕರ ಅಮೈ, ಖಜಾಂಜಿ ಲಕ್ಷ್ಮಣ ಗೌಡ ಕುದ್ಪಾಜೆ ಮತ್ತು ಸಮಿತಿಯ ಸರ್ವ ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಕೊಡಿಯಾಲಬೈಲು,ಕಾರ್ಯದರ್ಶಿ ವಿನಯಚಂದ್ರ ಕೊಡಿಯಾಲಬೈಲು, ಖಜಾಂಜಿ ಯತಿರಾಜ್ ದೀಟಿಗೆ ಮತ್ತು ಸರ್ವಸದಸ್ಯರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.