Ad Widget

ಕವನ : ಪ್ರೀತಿ ಸ್ನೇಹವ ಹಂಚಿ ನಡೆಯುವ ನಿಸ್ವಾರ್ಥ ಪಾಠವ ಕಲಿಸಿ ಮನಕೆ…

. . . . . . .

ಅರಳಿ ಬಾಡುವ ಹೂವು ನಗುವುದು ಸ್ವಾರ್ಥವಿರದೇ ಒಂದು ದಿನದ ಬದುಕಿನಲಿ…
ಹುಟ್ಟಿ ಸಾಯುವ ನಾವು ಸ್ವಾರ್ಥಿಯಾದೆವು, ಅಸೂಯೆ ಪಡುವೆವು ಹತ್ತಾರು ವರುಷದ ಬದುಕಿನಲಿ…
ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥವೇತಕೆ ನಮ್ಮ ಮನಕೆ, ಹೂವಿನಂತೆ ನಗುತ ಬಾಳುವ ನಾವು, ಪ್ರೀತಿ ಸ್ನೇಹವ ಹಂಚಿ ನಡೆಯುವ ನಿಸ್ವಾರ್ಥ ಪಾಠವ ಕಲಿಸಿ ಮನಕೆ…
ನಾಳೆ ಏನು ಎಂದು ತಿಳಿಯದು, ಈ ಕ್ಷಣವು ಎಂದೂ ನಮ್ಮದು…
ಕಳೆದ ಸಮಯವು ಮರಳಿ ಬಾರದು, ಈ ಕ್ಷಣದಲ್ಲಿ ಬದುಕು ನಡೆಯುವುದು…
ಸ್ವಾರ್ಥ ಯಾರಿಗೂ ಒಳಿತು ಮಾಡದು, ನಿಸ್ವಾರ್ಥ ಪ್ರೀತಿಯೇ ಜಗದಿ ಉಳಿಯುವುದು…
ಸ್ವಾರ್ಥ ಬಿಟ್ಟು ಮುಂದೆ ಸಾಗುವ, ಪ್ರೀತಿ ಸ್ನೇಹವ ಹಂಚಿ ನಡೆಯುವ ನಿಸ್ವಾರ್ಥ ಪಾಠವ ಕಲಿಸುತ್ತಾ ಬದುಕಿಗೆ…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!