ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಸೇವಾ ಭಾರತಿ ಹೆಲ್ಪ್ ಲೈನ್ (ರಿ.) ಸುಳ್ಯ ಇದರ ಆಶ್ರಯದಲ್ಲಿ ಏ.02 ರಿಂದ 09 ರವರೆಗೆ ಪೂರ್ವಾಹ್ನ 9:30 ರಿಂದ ಅಪರಾಹ್ನ 4:00 ರವರೆಗೆ ನಿಸರ್ಗ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.
ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾರ್ಥನೆ, ಯೋಗ, ಭಜನೆ, ಚಿತ್ರಕಲೆ, ಆಟಗಳು, ಕುಣಿತ ಭಜನೆ, ನಿಸರ್ಗ ವೀಕ್ಷಣೆ, ಜನಪದ ಹಾಡು, ಸಾಧಕರ ಪರಿಚಯ, ಅಭಿನಯ ಮತ್ತು ರಂಗ ತರಬೇತಿ ನಡೆಯಿತು.
ಏ.09 ರಂದು ಈ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹ ಸೇವಾ ಪ್ರಮುಖ್, ಮಾತೃಭೂಮಿ ಸೊಸೈಟಿಯ ಜಿಲ್ಲಾಧ್ಯಕ್ಷರು ಹಾಗೂ ಕೆ.ವಿ.ಜಿ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ.ಮನೋಜ್ ಹಾಗೂ ಅನುಗ್ರಹ ಎಜ್ಯುಕೇಶನಲ್ ಟ್ರಸ್ಟ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಗಣೇಶ್ ನಾಯರ್ ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ವಾಡ್ಯಪ್ಪನಮನೆ ಇವರಿಗೆ ನಿಸ್ವಾರ್ಥ ಕಾಯಕಯೋಗಿ ಆಪದ್ಭಾಂಧವ ಗೌರವಾರ್ಪಣಾ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬೇಸಿಗೆ ಶಿಬಿರದ ಆಯೋಜಕರು, ಬೇಸಿಗೆ ಶಿಬಿರರದಲ್ಲಿ ಭಾಗವಹಿಸಿದ ಮಕ್ಕಳು, ಪೋಷಕರು, ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
(ವರದಿ : ಉಲ್ಲಾಸ್ ಕಜ್ಜೋಡಿ)
- Friday
- November 1st, 2024