ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ನೇಮೋತ್ಸವವು ಎ.5 ರಂದು ವಿಜೃಂಭಣೆಯಿಂದ ನಡೆಯಿತು.
ಏ.3ರಂದು ಬೆಳಿಗ್ಗೆ ಶ್ರೀ ಮಹಾ ಗಣಪತಿ ಹವನ ನಡೆದು, ರಾತ್ರಿ ಶ್ರೀ ಉಳ್ಳಾಕುಳ ನೇಮ ಮತ್ತು ಕಾಜು ಕುಜುಂಬ ನೇಮ, ಕೈಕಾಣಿಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಎ.4ರಂದು ರಾತ್ರಿ ಇಷ್ಟದೇವತೆ ನೇಮೋತ್ಸವ ನಡೆದು, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಏ. 5ರಂದು ಬೆಳಿಗ್ಗೆ ನಾಗ ತಂಬಿಲ ನಡೆದು, ಮುಹೂರ್ತ ತೋರಣ ,ಮಧ್ಯಾಹ್ನ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು, ನೇತ್ರಾದಿ ಗರಡಿ ಯಲ್ಲಿ ದರ್ಶನ ನಡೆಯಿತು.
ರಾತ್ರಿ ಬೈದಿರುಗಳು ಗರಡಿ ಇಳಿಯುವುದು ನಡೆದು, ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ ನಡೆಯಿತು.
ಬೆಳಿಗ್ಗೆ 3.30ಕ್ಕೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀದಿಗೆ ಕಾಣಿಕೆ ಅರ್ಪಿಸುವುದು ನಡೆದು, ನಂತರ ಕೋಟಿ ಚೆನ್ನಯರ ದರ್ಶನ ರಂಗಸ್ಥಳದಲ್ಲಿ(ಸೇಟು) ಬೈದೇರುಗಳ ಸೇಟು ನಡೆಯಿತು.
ಬೆಳಿಗ್ಗೆ ಗಂಟೆ ೭ಕ್ಕೆ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಕುಮಾರಿ ಮೇಘನಾ ಸಾಲಿಗ್ರಾಮ ಮತ್ತು ತಂಡ ದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.