

ಮರ್ಕoಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಅಜ್ಜಿಕಲ್ ಭಾಗದಲ್ಲಿ 3 ಮನೆಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿಯವರು ರಾತ್ರೋರಾತ್ರಿ ಮನೆ ಮನೆಗೆ ರಾಜೇಶ್ ಬೇರಿಕೆಯವರ ಪಿಕಪ್ ವಾಹನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮೋಹನ್ ನಾಯ್ಕ್ ರೆಂಜಾಳ , ನಾರಾಯಣ ನಾಯ್ಕ್ ಅಜ್ಜಿಕಲ್ , ಪಂಚಾಯತ್ ಸಿಬ್ಬಂದಿ ಲೋಹಿತ್, ಶಶಿಕಾಂತ ಗುಳಿಗಮೂಲೆ ರೆಂಜಾಳ ನೀರಿನ ವ್ಯವಸ್ಥೆಗೆ ಸಹಕರಿಸಿದರು.
ಅಜ್ಜಿಕಲ್ ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗಿ ಒಂದು ವರ್ಷ ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಇದರ ಪರಿಣಾಮವಾಗಿ ಅಜ್ಜಿಕಲ್, ಕುದ್ಕುಳಿ, ಪೊಯ್ಯೆಗುಂಡಿ ಬಳ್ಳಕಾನ, ಕಟ್ಟಕೋಡಿ ಪರ್ಪುನಗುಂಡಿ, ಹೊಸೊಳಿಕೆ, ಪೈಲೂರು ಭಾಗದಲ್ಲಿ ಜನ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತಿದ್ದಾರೆ ಎಂದು ಪಂಚಾಯತ್ ಸದಸ್ಯರಾದ ಚಿತ್ತರಂಜನ್ ಕೋಡಿ ತಿಳಿಸಿದ್ದಾರೆ.