- Thursday
- November 21st, 2024
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕೃಷ್ಣಪ್ಪ ರವರು ಇಂದು ಅರಂತೋಡಿಗೆ ಭೇಟಿ ನೀಡಿ ಆ ಭಾಗದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ, ಎನ್ ಎಸ್ ಯು ಐ ಅಧ್ಯಕ್ಷರಾದ ಕೀರ್ತನ್ ಕೊಡಪಾಲ ಹಾಗೂ ಅರಂತೋಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆದಂಬಾಡಿ ರಾಮಯ್ಯ ಗೌಡ ಅವರ ನೇತೃತ್ವದಲ್ಲಿ ನಡೆದಿದ್ದ ಅಮರಸುಳ್ಯ ಹೋರಾಟದ ವಿಷಯ ಪಠ್ಯದಲ್ಲಿ ಸೇರ್ಪಡೆಗೊಂಡು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ವತಿಯಿಂದ ನಗರದಲ್ಲಿ ಬುಧವಾರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ದಿನಾಚರಣೆ,...
ಸುಬ್ರಹ್ಮಣ್ಯದ ಪ್ರಸಿದ್ಧ ಉಪನದಿ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ಎ.5 ರಂದು ವರದಿಯಾಗಿದೆ. ಒಂದು ಕಡೆ ನೀರಿನ ಹರಿವಿನ ಪ್ರಮಾಣ ಕಡಮೆಯಾಗಿರುವುದು ಹಾಗೂ ನೀರಿಗೆ ಡ್ರೈನೇಜ್ ನೀರು ಸೇರುತ್ತಿರುವುದು ಕಂಡು ಬಂದಿದ್ದು ಇದರಿಂದ ಸಾವಿರಾರು ಜಲಚರಗಳು ಸತ್ತಿರುವುದು ಕಂಡು ಬಂದಿದೆ. ಮೀನುಗಳು ಸತ್ತು ತೆಲುತ್ತಿದೆ. ಇದರಿಂದಾಗಿ ಭಾರಿ ವಾಸನೆಯೂ ಬರುತ್ತಿದೆ. ನದಿಯ...
ಏ.05 ರಂದು ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಮಾಹಿತಿ ಕಾರ್ಯಗಾರ ಏರ್ಪಡಿಸಲಾಗಿತ್ತು.ಮಾಹಿತಿಯನ್ನು ಜೀವನ ಶಿಕ್ಷಣ ತರಬೇತುದಾರರಾದ ಲೋಕೇಶ್ ಪೀರನಮನೆ ನಡೆಸಿಕೊಟ್ಟರು.ಕಂಪ್ಯೂಟರ್ ತರಬೇತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಚಟುವಟಿಕೆಗಳ ಬಗ್ಗೆ ಶ್ರೀ ದುರ್ಗಾ ಕಂಪ್ಯೂಟರ್ ನ ಮಾಲಕಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಮಾಹಿತಿ ನೀಡಿದರು.ಕಂಪ್ಯೂಟರ್ ಶಿಕ್ಷಕಿ ಯಶಸ್ವಿ ಗಿರೀಶ್...
ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಈ ಬಗ್ಗೆ ಅಂತಿಮ ಪೂರ್ವಭಾವಿ ಸಭೆ ಏ. 5ರಂದು ಅಜಪಿಲ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕೋಶಾಧಿಕಾರಿ ವಸಂತ ಪಡ್ಪು, ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಿತಿಯ...
ಮರ್ಕoಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಅಜ್ಜಿಕಲ್ ಭಾಗದಲ್ಲಿ 3 ಮನೆಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿಯವರು ರಾತ್ರೋರಾತ್ರಿ ಮನೆ ಮನೆಗೆ ರಾಜೇಶ್ ಬೇರಿಕೆಯವರ ಪಿಕಪ್ ವಾಹನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮೋಹನ್ ನಾಯ್ಕ್...