ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ_ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಶುಭಶ್ರೀ ಮಹಿಳಾ ಮಂಡಲ (ರಿ) ಗಾಂಧಿನಗರ ಸುಳ್ಯ ಇದರ ಸಂಯುಕ್ತ ಆಶ್ರಯ ದಲ್ಲಿ ಬ್ಯುಟೀಷಿಯನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶ್ರೀ ಚೆನ್ನಕೇಶವ ದೇವಾಲಯದ ಲ್ಲಿ ನೆರವೇರಿತು.ಮುಖ್ಯ ಅತಿಥಿ ಯಾಗಿ ಆಗವಿಸಿದ ಶ್ರೀಮತಿ ಚಂಚಲ ತೇಜೋಮಯ, ಅಧ್ಯಕ್ಷ ರು ಯಶಸ್ವಿನಿ ಶ್ರೀ ಮಹಿಳಾ ಸೌಹಾರ್ಧ ಸಹಕಾರಿ (ನಿ)ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ) ಯವರು ಕಾರ್ಯಕ್ರಮ ದ ಬಗ್ಗೆ ಸಂತಸ ವ್ಯಕ್ತಪಡಿಸಿದರು ಹಾಗೂ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಶಿಬಿರಾರ್ಥಿಗಳಿಗೆ ಕೊಡಲ್ಪಡುವ ಪ್ರಮಾಣಪತ್ರವನ್ನು ವಿತರಿಸಿದರು.ಮಹಿಳೆಯರು ಸ್ವಾವಲಂಬಿಗಳಾಗಿ ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಬೇಕು ಎಂದರು.
ಶ್ರೀ ರಘವೀರ ಸೂಟರ್ ಪೇಟೆ, ಮಾಜಿ ಜಿಲ್ಲಾ ಯುವ ಅಧಿಕಾರಿ,ಇವರು ಶುಭಶ್ರೀ ಮಹಿಳಾ ಮಂಡಲದ ಕಾರ್ಯಕ್ರಮ ಕ್ಕೆ ಶುಭ ಹಾರ್ರೆಸಿ, ಇನ್ನೂ ಹೆಚ್ಚಿನ ಕಾರ್ಯಕ್ರಮ ಗಳು ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಮೂಡಿ ಬರಲಿ ಎಂದರು.
ಮುಖ್ಯ ಅತಿಥಿ ಗಳಾದ ಎನ್.ಜಯಪ್ರಕಾಶ ರ್ರೆ, ವಕೀಲರು, ಅಧ್ಯಕ್ಷ ರು ಸುಳ್ಯ ತಾಲ್ಲೂಕು ಬಂಟರ ಯಾನೆ ನಾಡವರ ಸಂಘ(ರಿ) ಸುಳ್ಯ, ಪ್ರೋತ್ಸಾಹ ದಾಯಕ ಮಾತುಗಳನ್ನಾಡಿ ಕಾರ್ಯಕ್ರಮ ಕ್ಕೆ ಶುಭ ಹಾರ್ರೆಸಿದರು.ಈ ಶಿಬಿರದ ತರಬೇತುದಾರ ರಾದ ಇಂದಿರಾ ರಾಜಶೇಖರ ರ್ರೆ ಅಧ್ಯಕ್ಷ ರು ಸುಳ್ಯ ತಾಲೂಕು ನಿವೇದಿತಾ ಮಹಿಳಾ ಜಾಗ್ತತಿ ಸೇವಾಟ್ರಸ್ಟ್(ರಿ) ಹಾಗೂ ಸುಳ್ಯ ತಾಲೂಕು ಮಹಿಳಾ ಮಂಡಲದ ಒಕ್ಕೂಟದ ಗೌರವಾಧ್ಯಕ್ಷೆಯವರು ತರಬೇತಿ ನೀಡಿದ ಬಗ್ಗೆ ಸಂತ್ರಪ್ತಿಯನ್ನು ವ್ಯಕ್ಯಪಡಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ಮುಂದೆಯೂ ಬೇಕಾದ ಸಹಾಯ ದ ಭರವಸೆಯನ್ನು ನೀಡಿ ಶುಭ ಹಾರ್ರೆಸಿದರು. ಶುಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್ ರವರು ಸ್ವಾಗತಿಸಿದರು. ಶ್ರೀಮತಿ ಗಿರಿಜಾ ಎಂ.ವಿ.ಮತ್ತು ಶ್ರೀಮತಿ ಸುಮಂಗಲಾ ರವಿರಾಜ್ ರವರು ಕಾರ್ಯಕ್ರಮ ವನ್ನು ನಿರೂಪಿಸಿದರು.ಶ್ರೀಮತಿ ಸುಜಾತ ಎನ್ ರವರು ವಂದಿಸಿದರು.
ಇದೇ ಸಂದರ್ಭದಲ್ಲಿ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಶ್ರೀಮತಿ ಚಂಚಲ ತೇಜೋಮಯ ಮತ್ತು ರಘವೀರ. ಸೂಟರ್ ಪೇಟೆ ಯವರನ್ನು ಸನ್ಮಾನಿಸಲಾಯಿತು
- Friday
- November 1st, 2024