ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು, ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇವರ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಶಿಬಿರ “ಸ್ವಾವಲಂಬನೆಯೆಡೆಗೆ ಒಂದು ಹೆಜ್ಜೆ” ಏಪ್ರಿಲ್11 ರಿಂದ 14ರ ವರೆಗೆ ಅರಂತೋಡು ಶಾಲೆಯಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ 15 ವರುಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಸಿಹಿತಿಂಡಿ,ಕೇಕ್, ಹಪ್ಪಳ ಸಂಡಿಗೆ , ಉಪ್ಪಿನಕಾಯಿ ತಯಾರಿಕೆ, ಫ್ಯಾಷನ್ ಡಿಸೈನಿಂಗ್, ಮೆಹಂದಿ, ಕೇಶ ವಿನ್ಯಾಸ, ಕಿವಿಯೋಲೆ, ಬಳೆ, ಮ್ಯಾಟ್ ತಯಾರಿಕೆ, ನರ್ಸರಿ ಕೃಷಿ & ಕಸಿ ಕಟ್ಟುವಿಕೆ, ಅಣಬೆ ಕೃಷಿ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿಯನ್ನು ನುರಿತ ತರಬೇತುದಾರರು ನೀಡಲಿದ್ದಾರೆ. ಹೆಚ್ಚಿನ ವಿವರಗಳಿಗೆ 9686074341, 99071987118, 98722443776 ಇವರನ್ನು ಸಂಪರ್ಕಿಸಬಹುದು.
- Thursday
- April 3rd, 2025