ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ವರ್ಷಂಪ್ರತಿ ನಡೆಯುವಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.1 ಮತ್ತು 2ರಂದು ಭಕ್ತಿ ಸಂಭ್ರಮದಿಂದ ಜರುಗಿತು.
ಎ.1 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ತೀಯ ಸಮಾಜ ಬಾಂಧವರು ಮೆಲೇರಿಯ ಅಗ್ನಿ ಕುಂಡ ಜೋಡಣೆಯ ಕಾರ್ಯ ನೆರವೇರಿಸಿದರು. ಸಂಜೆ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆದು ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಹಾಗೂ ವಯನಾಟ್ ಕುಲವನ್ ದೈವದ ದರ್ಶನ ಪಾತ್ರಿ ಆನಂದ ಅಡ್ಪಂಗಾಯ ರವರ ನೇತೃತ್ವದಲ್ಲಿ ದೈವದ ಭಂಡಾರ ಆಗಮಿಸಿತು. ನಂತರ ಮೆಲೇರಿಗೆ ಅಗ್ನಿ ಸ್ಪರ್ಶವಾಗಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವು ನಡೆಯಿತು. ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಿ ಮಾರಿಕಳ ಪ್ರವೇಶ ವಾಯಿತು.
ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕ ಶಿವಪ್ರಸಾದ್ ಆಲೆಟ್ಟಿ ನಿರ್ದೇಶನದ ಶಿವಸ್ವರ ಮ್ಯೂಸಿಕಲ್ಸ್ ರವರ ಸಂಗೀತ ರಸಮಂಜರಿ ಹಾಗೂ ವಸಂತ ಕಾಯರ್ತೋಡಿ ಸಾರಥ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇವರಿಂದ ನೃತ್ಯ ಕಾರ್ಯಕ್ರಮ ಪ್ರದರ್ಶನ ಗೊಂಡಿತು.
ರಾತ್ರಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಕುಂಚಡ್ಕ ಕುಟುಂಬದ ಯಜಮಾನರಾದ ಒಬಯ್ಯ ಗೌಡ ಕುಂಚಡ್ಕ, ಒತ್ತೆಕೋಲ ಸಮಿತಿಯ ಆಡಳ್ತೆದಾರ ತೀರ್ಥಕುಮಾರ್ ಕುಂಚಡ್ಕ ಹಾಗೂ ಕುಟುಂಬದ ಸದಸ್ಯರುಗಳಾದ ಕೊರಗಪ್ಪ ಮಾಸ್ತರ್ ಕುಂಚಡ್ಕ, ದೊಡ್ಡಯ್ಯ ಗೌಡ ಕುಂಚಡ್ಕ, ಜಯಪ್ರಕಾಶ್ ಕುಂಚಡ್ಕ, ಧನಂಜಯಕುಂಚಡ್ಕ, ಬಾಲಕೃಷ್ಣ ಗೌಡ ಕುಂಚಡ್ಕ,ವೆಂಕಪ್ಪಮಾಸ್ತರ್ ಕುಂಚಡ್ಕ, ರಾಮಣ್ಣ ಗೌಡ ಕುಂಚಡ್ಕ, ಪೂವಯ್ಯಗೌಡ ಕುಂಚಡ್ಕ,ಗೋಪಾಲ ಕುಂಚಡ್ಕ, ದಾಮೋದರ ಗೌಡ ಕುಂಚಡ್ಕ, ಪ್ರವೀಣ್ ಕುಂಚಡ್ಕ, ರಂಗನಾಥ ಕುಂಚಡ್ಕ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಸರ್ವರನ್ನೂ ಕುಂಚಡ್ಕ ಕುಟುಂಬಸ್ಥರು ಸ್ವಾಗತಿಸಿದರು.