ಭಾರತ ಸರ್ಕಾರದ ಪ್ರಧಾನ ಮಂತ್ರಿಯವರ ಪಿ.ಎಂ ಶ್ರೀ ಯೋಜನೆಯಲ್ಲಿ ಗುತ್ತಿಗಾರು ಸ.ಮಾ.ಹಿ.ಪ್ರಾ.ಶಾಲೆ ಆಯ್ಕೆಯಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC). ಶಿಕ್ಷಣ ಸಚಿವಾಲಯದ ಅಧೀನದಲ್ಲಿ
ಕರ್ನಾಟಕ ರಾಜ್ಯದಲ್ಲಿ 129 ಶಾಲೆಗಳ ಪೈಕಿ ಸುಳ್ಯ ತಾಲೂಕಿನಲ್ಲಿ ಗುತ್ತಿಗಾರು ಸ.ಮಾ.ಹಿ.ಪ್ರಾ.ಶಾಲೆ ಆಯ್ಕೆಯಾದ ಏಕೈಕ ಶಾಲೆಯಾಗಿದೆ.
ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಎನ್ನುವ ಸ್ಕೀಂ ನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ 14500 ಶಾಲೆಗಳು ಇದರ ಆಯ್ಕೆಯಲಿವೆ. ಸ್ಮಾರ್ಟ್ ಲ್ಯಾಬ್, ಸ್ಮಾರ್ಟ್ ತರಗತಿಗಳು, ಲೈಬ್ರರಿ, ಕ್ರೀಡಾ ಕೊಠಡಿ ಮತ್ತಿತರ ವ್ಯವಸ್ಥೆ ಇದರಲ್ಲಿದ್ದು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಶಿಕ್ಷಣ ನೀಡುವ ವ್ಯವಸ್ಥೆಗೆ ಇದು ಪೂರಕವಾಗಿರಲಿದೆ.
ಈ ಯೋಜನೆಯನ್ನು 5 ವರ್ಷಗಳ ಅವಧಿಯಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ 2022-23 ರಿಂದ 2026-27 ಈ ಅವಧಿಯೊಳಗೆ ಮುಗಿಯಲಿದೆ ಎಂದು ತಿಳಿದು ಬಂದಿದೆ.