Ad Widget

ಗಾಂಧಿನಗರ : ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

. . . . . . . . .

ಶುಭಶ್ರೀ ಮಹಿಳಾ ಮಂಡಲ(ರಿ) ಗಾಂಧಿನಗರ ಇದರ ವತಿಯಿಂದ. ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ಮಾ. 30ರಂದು ನಡೆಯಿತು. ಈ ಕಾರ್ಯಕ್ರಮ ವನ್ನು ಲಯನ್ಸ್ ಅಧ್ಯಕ್ಷೆ ಶ್ರೀಮತಿ ರೂಪಾಶ್ರೀ ಜೆ.ರೈ ಯವರು ಉದ್ಘಾಟಿಸಿ ಮಹಿಳಾ ದಿನಾಚರಣೆ ಯ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಎನ್. ಮತ್ತು ಸಹಾಯಕಿ ಪುಷ್ಪಾವತಿ ಯವರನ್ನು ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಅಂಗನವಾಡಿ ಆಡಳಿತ ಕಮಿಟಿ ಅದ್ಯಕ್ಷ ಜೆ.ಕೆ.ರೈ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ವನಿತಾ, ಶುಭಶ್ರೀ ಮಹಿಳಾ ಮಂಡಲದ ಸದಸ್ಯೆರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶ್ರೀಮತಿ ಸುಜಾತ ಎನ್ ಮತ್ತು ಶ್ರೀಮತಿ ಉಷಾ ಜೆ. ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.ಶುಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್ ರವರು ಸ್ವಾಗತಿಸಿದರು. ಶ್ರೀಮತಿ ಗಿರಿಜಾ ಎಂ ವಿ. ಪ್ರಾರ್ಥಿಸಿದರು. ಶ್ರೀಮತಿ ಸುನಂದಾ ಶಟ್ಟಿಯವರು ನಿರೂಪಿಸಿದರು. ಶ್ರೀಮತಿ ಕವಿತಾ ಸಂತೋಷ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading