ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಅಧಿಕಾರ ಸ್ವೀಕರಿಸಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಸುಳ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನರವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಎಂ.ಚಂದ್ರಕಾಂತ ಬೆಳ್ಳಾರೆ, ಶ್ರೀಮತಿ ಎ.ನವಪ್ರಭ ತಂಬಿನಮಕ್ಕಿ, ಕೆ.ವಿಶ್ವನಾಥ ಭಟ್ ಕುರುಂಬುಡೇಲು, ಪಿ.ಗಂಗಾಧರ ರೈ ಪುಡ್ಕಜೆ, ಅರ್ಚಕ ಉದಯಕುಮಾರ್ ಕೆ.ಟಿ , ಪಿ.ರಾಧಾಕೃಷ್ಣ ಕುಲಾಲ್ ಬಸ್ತಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಉಪಸ್ಥಿತರಿದ್ದರು.