- Thursday
- November 21st, 2024
ಎಣ್ಮೂರು ಗ್ರಾಮದಲ್ಲಿ ಗ್ರಾಮಸ್ಥರು ಪಂಚಾಯತ್ ನಿಂದ ಏನೇ ಕೆಲಸವಾಗಬೇಕಾದರೂ 7 ಕಿ. ಮೀ. ದೂರದಲ್ಲಿರುವ ಎಡಮಂಗಲ ಗ್ರಾಮ ಪಂಚಾಯತ್ ಗೆ ಹೋಗಬೇಕು. ಎಣ್ಮೂರು ಗ್ರಾಮದಲ್ಲಿ ಪುನಃ ಕಾರ್ಯಾಲಯವನ್ನು ತರಬೇಕು ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುತ್ತೇವೆಂದು ಬ್ಯಾನರ್ ಅಳವಡಿಸಲಾಗಿದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ.19 ರವರೆಗೆ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು.ಯಂ.ಕಿಶೋರ್ ಕುಮಾರ್ ಮತ್ತು ವ್ಯ.ಸ.ಸದಸ್ಯರು, ಮಾಜಿ ಅಧ್ಯಕ್ಷರಾದ ಕೇಶವ ಕೊಳಲುಮೂಲೆ, ದೇವಳದ ಮನೇಜರ್ ಆನಂದ ಕಲ್ಲಗದ್ದೆ, ಅರ್ಚಕರು, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಸಂಜೆ 4 ಗಂಟೆಗೆ ಶ್ರೀ ಭಗವತಿ ದೊಡ್ಡಮುಡಿ ಉತ್ಸವ ನಡೆಯುವುದು. ಬೆಳಗ್ಗೆ ಪೊಟ್ಟನ್ ದೈವ ನಡೆಯಿತು. ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ ನಡೆಯುವುದು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯುವುದು.ಸಂಜೆ...
ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.29 ಮತ್ತು 30 ರಂದು ನಡೆದರೆ, ಎ.1ರಂದು ಶ್ರೀ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ ನಡೆಯುವುದು. ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ ನಡೆದು ವಿವಿಧ ಪೂಜಾ ಕಾರ್ಯಗಳು ನಡೆದವು. ಮಾ.30ರಂದು ಬೆಳಗ್ಗೆ...