ಪುತ್ತೂರಿನ ಆರ್ಯಾಪು ಗ್ರಾ.ಪಂ. ಉಪ ಚುನಾವಣೆ – ಯತೀಶ್ ದೇವ ಭರ್ಜರಿ ಗೆಲುವು
ಪುತ್ತೂರು ತಾಲೂಕಿನ ಆರ್ಯಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ ಜಯಗಳಿದ್ದಾರೆ. ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 498ಮತಗಳನ್ನು ಪಡೆದು,327 ಮತಗಳನ್ನು ಪಡೆದ ಪ್ರತಿಸ್ಪರ್ದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೋಟ್ಲಾ ರವರ ವಿರುದ್ದ 171ಮತಗಳ ಅಂತರದಿಂದ ಜಯಗಳಿಸಿದರು. ಇವರು ದೇವಚಳ್ಳ ಗ್ರಾಮದ ದೇವಮನೆ ಬಾಲಕೃಷ್ಣ ಗೌಡ ಮತ್ತು ಪಷ್ಪಾವತಿ ದಂಪತಿಗಳ ಪುತ್ರ, ಪ್ರಸ್ತುತ ಪುತ್ತೂರು ತಾಲೂಕು ಆರ್ಯಪು ಗ್ರಾಮಪಂಚಾಯತ್ ವ್ಯಾಪ್ತಿಯ ಸಂಟ್ಯಾರು ನಲ್ಲಿ ನೆಲೆಸಿದ್ದು, ಪತ್ನಿ ಶ್ರೀಮತಿ ಜ್ಯೋತಿ ರವರು ಕೆ ಯಸ್ ಆರ್ ಟಿ ಸಿ ಪುತ್ತೂರಿನಲ್ಲಿ ಗಣಕ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಇವರು ದೇವ ತರವಾಡು ಶ್ರೀ ಧರ್ಮ ದೈವ್ವ ಮತ್ತು ಪರಿವಾರ ದೈವ್ವಗಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ,ಕಾರ್ಪಡಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ದಾರ ಆರ್ಥಿಕ ಸಮಿತಿ ಸದಸ್ಯರಾಗಿ, ಸಂಟ್ಯಾರು ಶ್ರೀ ವಿನಾಯಕ ಭಜನಮಂದಿರದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿಯಾಗಿ,ರಾಜ್ಯಮಟ್ಟದಲ್ಲಿ ಸುದ್ದಿಯಾದ ಸಂಟ್ಯಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಾಂತಿಮಂಜುನಾಥ ರವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷರಾಗಿ ಸಾಮಾಜಿಕ ಹಾಗೂ ಧಾರ್ಮಿಕ ವಾಗಿ ಗುರುತಿಸಿಕೊಂಡಿದ್ದಾರೆ.