ಮಾ.18 ಮತ್ತು 19 ರಂದು ಮಾವಿನಕಟ್ಟೆ ಒತ್ತೆಕೋಲ – ಆಮಂತ್ರಣ ಬಿಡುಗಡೆ
ಮಾವಿನಕಟ್ಟೆ ಉದಯಗಿರಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದ್ದು, ಫೆ. 27 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಆರ್. ಶ್ರೀ ಕಟೀಲ್ ಮಾವಿನಕಟ್ಟೆ, ಕೋಶಾಧಿಕಾರಿ ಗೋಪಿನಾಥ ಮೆತ್ತಡ್ಕ, ಪ್ರದಾನ ಪೂಜಾರಿ ದಾಮೋದರ ಮಣಿಯಾಣಿ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾದ ಕೃಷ್ಣಪ್ಪ ಗೌಡ ಮಾವಿನಕಟ್ಟೆ, ನವೀನ್ ಜಾಕೆ, ನಿತ್ಯಾನಂದ ಪಾರೆಪ್ಪಾಡಿ, ಭಾಸ್ಕರ ಬಾಳೆತೋಟ, ಬಾಲಕೃಷ್ಣ ಗೌಡ ತಳೂರು, ರಾಮಚಂದ್ರ ಗೌಡ ನಾಗನಗದ್ದೆ, ನರಸಿಂಹ ಗೌಡ ಮೆತ್ತಡ್ಕ, ಪದ್ಮನಾಭ ಮಂಜೋಳುಕಜೆ, ಲೋಕೇಶ್ ಪೂಜಾರಿ ತಳೂರು, ವೆಂಕಟ್ರಮಣ ಮೆದು, ಕೆ.ಬಿ.ಎಸ್.ನಾರಾಯಣ ಗೌಡ ಕುಚ್ಚಾಲ, ಜಗತ್ ಪಾರೆಪ್ಪಾಡಿ ಉಪಸ್ಥಿತರಿದ್ದರು.