
ಜೀವನ ಅಂದ್ರೆನೇ ಹಾಗೆ ಇಲ್ಲಿ ನಾವು ಯೋಚಿಸಿದಂತೆ ಏನೂ ನಡೆಯೋದಿಲ್ಲ, ಅನಿರೀಕ್ಷಿತವೇ ಇಲ್ಲಿ ಎಲ್ಲಾ…
ಜೀವನದಲ್ಲಿ ನಮಗೆ ನಾಳೆ ಹೇಗಿರುತ್ತೆ ಅನ್ನೋ ಕಲ್ಪನೆ ಮಾಡೋದಿಕ್ಕೆ ಆಗೋದಿಲ್ಲ, ಕಲ್ಪನೆಯಂತೆ ಈ ಜೀವನ ಎಂದೂ ನಡೆಯೋದಿಲ್ಲ, ಕಲ್ಪನೆಯೇ ಬೇರೆ ಇಲ್ಲಿ ವಾಸ್ತವವೇ ಬೇರೆ…
ಇಲ್ಲಿ ನಿನ್ನೆಗಳ ಬಗ್ಗೆ ಯೋಚಿಸಿ ಫಲವಿಲ್ಲ, ನಾಳೆ ಹೇಗಿರುತ್ತೆ ಅಂತ ಯೋಚಿಸೋದಿಕ್ಕೆ ಆಗೋದಿಲ್ಲ…
ಇಲ್ಲಿ ನಾವು ಕಾಣೋ ಕನಸುಗಳಿಗೆ ಮಿತಿ ಇಲ್ಲ, ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳೋದು ಕನಸು ಕಂಡಷ್ಟು ಸುಲಭ ಅಲ್ಲ…
ಈ ಜೀವನ ಒಂಥರಾ ಸೋಲು ಗೆಲುವಿನ ಆಟ, ಇಲ್ಲಿ ಯಾರು ಸೋಲ್ತಾರೆ, ಯಾರು ಗೆಲ್ತಾರೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಇವತ್ತು ಗೆದ್ದವನು ನಾಳೆ ಸೋಲ್ಬೋದು, ಇವತ್ತು ಸೋತವನು ನಾಳೆ ಗೆಲ್ಬೋದು. ಆದ್ರೆ ಒಂದಂತೂ ನಿಜ ದೊಡ್ಡವರು ಹೇಳಿದಂತೆ “ಇಲ್ಲಿ ಇವತ್ತು ಗೆದ್ದವನಿಗೆ ನಾಳೆ ಸೋಲ್ಬಾರ್ದು ಅನ್ನೋ ಭಯ ಇದ್ರೆ, ಇವತ್ತು ಸೋತವನಿಗೆ ನಾಳೆ ಗೆಲ್ಬೇಕು ಅನ್ನೋ ಛಲ ಇರುತ್ತೆ…”
ಆದ್ದರಿಂದ ನಾವು ನಾಳೆ ಏನಾಗುತ್ತೆ ಅನ್ನೋ ಯೋಚನೆ ಮಾಡದೇ, ನಿನ್ನೆಯ ಬಗ್ಗೆ ಚಿಂತೆ ಮಾಡದೇ ಇರುವಷ್ಟು ದಿನ ನಮ್ಮಿಂದಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ, ನಾವು ಕಂಡ ಕನಸಿನತ್ತ ಹೆಜ್ಜೆ ಹಾಕೋಣ…
✍️ಉಲ್ಲಾಸ್ ಕಜ್ಜೋಡಿ