Ad Widget

ಮಹಾಶಿವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ

ಮಹಾಶಿವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ

. . . . . . .

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮವು ನೆರವೇರಿತು.‌ಖ್ಯಾತ ಕೃಷಿಕರಾದ ಸಿ ಕೆ ನವೀನ್ ಚಾತುಬಾಯಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು . ಸಭಾಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಮತ್ತು ಗಾಯಕ ಹಾಗೂ ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿ ಕಾರ್ಯಕ್ರಮ ನಿರೂಪಿಸಿದರು . ದಿವ್ಯ ಸಾನಿಧ್ಯ ವಹಿಸಿದ್ದ ಸುಳ್ಯದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಉಮಾದೇವಿಯವರು ಶಿವರಾತ್ರಿ ಹಬ್ಬದ ವಿಶೇಷತೆಯನ್ನು ತಿಳಿಸಿದರು . ಪ್ರಾಸ್ತಾವಿಕ ನುಡಿಗಳನ್ನು ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ಅವರು ಮಾತಾಡಿದರು . ಮುಖ್ಯ ಅತಿಥಿಗಳಾಗಿ ಗುಲ್ಬರ್ಗದ ಸಹಾಯಕ ಕೃಷಿ ನಿರ್ದೇಶಕರಾದ ಗಣಧರ ಆರ್ ಕೋಟಿ ಮತ್ತು ಪತ್ರಕರ್ತ ಯಶ್ವಿತ್ ಕಾಳಮನೆ ರವರು ಉಪಸ್ಥಿತರಿದ್ದರು . ವಾಷ್ಠರ್ ಸಂಗೀತ ಬಳಗದ ಕಾರ್ಯದರ್ಶಿ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಸ್ವಾಗತಿಸಿದರು . ಮಮತಾ ಮಡಿಕೇರಿ ಅವರು ವಂದಿಸಿದರು .ಭಕ್ತಿಗೀತೆ ಗಾನ ವೈಭವದಲ್ಲಿ ಗಾಯಕರಾದ ಸುರೇಶ ಕುಮಾರ್ ಜೆ , ಜಯಂತ್ ಮೆತ್ತಡ್ಕ , ಪ್ರವೀಣ್ ಡಿ ದೇವ , ಅಮೂಲ್ಯ ಎ ಕೆ, ತುಳಸಿ ಕೆ ಬಿ , ಭೂಮಿಕಾ ಕೆ ವಿ , ಅವನಿ ಎಂ ಎಸ್ ಸುಳ್ಯ , ಯಶ್ವಿತಾ ಕುಂಟಿನಿ , ಪ್ರಭಾವತಿ ಸುಳ್ಯ , ಪುಷ್ಪಾ ಸುಳ್ಯ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು , ಚಂದನ್ ಸುಳ್ಯ , ಚಿನ್ಮಯ್ ಸುಳ್ಯ , ಸುಮಾ ಕೋಟೆ , ಚೆನ್ನಕೇಶವ ಮಾಸ್ಟರ್ ಸ್ಟುಡಿಯೋ , ಅಶ್ವಿಜ್ ಆತ್ರೇಯ ಸುಳ್ಯ , ಮಮತಾ ಮಡಿಕೇರಿ , ಸಾಯಿ ಪ್ರಶಾಂತ್ ಮತ್ತು ಯಮುನಾ ಹಳೆಗೇಟು ರವರು ವಿವಿಧ ದೇವರ ಭಕ್ತಿಗೀತೆಗಳನ್ನು ಹಾಡಿದರು . ಎಲ್ಲಾ ಗಾಯಕರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!