ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ) ಇದರ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ಅವರನ್ನು ಮಧುಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಪ್ರಶಸ್ತಿ ಪ್ರಧಾನ ಮಹಾ ಸಮ್ಮೇಳನವು ಗಡಿನಾಡ ಪ್ರದೇಶವಾದ ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 2023 (25) ಫೆಬ್ರವರಿ ರಂದು ನಡೆಯಲಿದೆ. ಸದ್ರಿ ಮಹಾ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಮಧು ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಗಡಿನಾಡ ದ್ವನಿಯ ಅಧ್ಯಕ್ಷರಾದ ಡಾ. ಹಾಜಿಎಸ್ ಅಬ್ಬುಬಕರ್ ಅರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲ್ಪಡುವ ರಾಜ್ಯ ಪ್ರಶಸ್ತಿಗೆ ವಿಶ್ವದಲ್ಲಿ ಪ್ರಪ್ರಥಮವಾಗಿ
ಜೇನು ಗಡ್ಡ ತೋರಿಸಿಕೊಟ್ಟ ಸಾಧಕಿ ಮಹಿಳೆ ಜೇನು ಕೃಷಿ ವಿಶಿಷ್ಟ ಬರಹಗಳು ಕಲಾಪ್ರಿಯರು ಕಲಾ ಪೋಷಕರಾಗಿ ಗುರುತಿಸಿಕೊಂಡಿರುವ ಸೌಮ್ಯ ಪೆರ್ನಾಜೆ ಆಯ್ಕೆಯಾಗಿದ್ದಾರೆ.
ಇವರಿಗೆ ಈಗಾಗಲೇ ಈಶ್ವರಮಂಗಳದಲ್ಲಿ ಗ್ರಾಮ ಗ್ರಾಮದ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇವರು ಹಾಗೆ ಹವ್ಯಕ ರತ್ನ ರಾಷ್ಟ್ರೀಯ ಪುರಸ್ಕೃತ ಕುಮಾರ್ ಪೆರ್ನಾಜೆ ಅವರ ಪತಿ ಇಬ್ಬರು ಮಕ್ಕಳು ನಂದನ್ ಕುಮಾರ್ , ಚಂದನ್ ಕುಮಾರ್, ತಂದೆ ರಾಮಚಂದ್ರ ಭಟ್, ದೇವಕಿ ಅವರ ಸುಪುತ್ರಿ .
- Thursday
- November 21st, 2024