Ad Widget

ಬೆಳ್ಳಾರೆ : ಫೆ.23 ಸುಳ್ಯ ರೈತ ಉತ್ಪಾದಕ ಕಂಪನಿಯ ಬೆಳ್ಳಾರೆ ಶಾಖೆಯ ಕಛೇರಿ ಉದ್ಘಾಟನಾ ಸಮಾರಂಭ

ಬೆಳ್ಳಾರೆ : ಫೆ.23 ಸುಳ್ಯ ರೈತ ಉತ್ಪಾದಕ ಕಂಪನಿಯ ಬೆಳ್ಳಾರೆ ಶಾಖೆಯ ಕಛೇರಿ ಉದ್ಘಾಟನಾ ಸಮಾರಂಭ

. . . . . . . . .

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅಟಲ್ ಇನ್ಕ್ಯೂಬೆಷನ್ ಸೆಂಟರ್ ನಿಟ್ಟೆ ಇವುಗಳ ಸಹಕಾರದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಕಂಪನಿ(ನಿ.) ಇದರ ಬೆಳ್ಳಾರೆ ಶಾಖೆಯ ಉದ್ಘಾಟನಾ ಸಮಾರಂಭವು ಫೆ.23 ರಂದು ಪೂರ್ವಾಹ್ನ 10:00 ಗಂಟೆಗೆ ಶ್ರೀ ಕೃಷ್ಣ ಆರ್ಕೇಡ್ ಮಾಸ್ತಿಕಟ್ಟೆ, ಬೆಳ್ಳಾರೆ ಇಲ್ಲಿ ನಡೆಯಲಿದ್ದು, ಕ್ಯಾಂಪ್ಕೋ ಲಿ. ಮಂಗಳೂರು ಇದರ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಇವರು ಕಛೇರಿಯನ್ನು ಉದ್ಘಾಟಿಸಲಿದ್ದು, ಪುತ್ತೂರು ಉಪಕೃಷಿ ನಿರ್ದೇಶಕರಾದ ಶಿವಶಂಕರ್ ಹೆಚ್ ದಾನೆಗೊಂಡರ್ ರಾಸಾಯನಿಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ರೈತ ಉತ್ಪಾದಕ ಕಂಪನಿ ಸುಳ್ಯ ಇದರ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೀಶ್ ಹೆಚ್ ಆರ್, ಅಟಲ್ ಇನ್ಕ್ಯೂಬೆಷನ್ ಸೆಂಟರ್ ನಿಟ್ಟೆ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಪಿ ಆಚಾರ್, ತೋಟಗಾರಿಕೆ ಇಲಾಖೆ ಸುಳ್ಯದ ಹಿರಿಯ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ.ಪಿ.ಕೆ, ಕೃಷಿ ಇಲಾಖೆ ಸುಳ್ಯದ ಪ್ರಭಾರ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ರೈ ಅಜಿರಂಗಳ, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತಾ ಗುರುರಾಜ್, ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಕುಮಾರ್.ಕೆ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಕಛೇರಿ ಕಟ್ಟಡದ ಮ್ಹಾಲಕರಾದ ಎಸ್.ಪಿ ಮುರಳೀಧರ, ಗೋದಾಮು ಕಟ್ಟಡದ ಮ್ಹಾಲಕರಾದ ಶಶಿಧರ್ ಬಿ.ಕೆ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading