
ಕೊಯನಾಡು : ಸ್ವಲಾತ್ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆ
ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಇದರ 25ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ದ್ವಿದಿನ ಧಾರ್ಮಿಕ ಉಪನ್ಯಾಸದ ಪ್ರಚಾರ ಪತ್ರವನ್ನು ಮಸೀದಿ ಅದ್ಯಕ್ಷ ಅಬ್ದುಲ್ ರಝಾಕ್ ಎಸ್ ಎ ಹಾಗೂ ಎನ್ ಐ ಎ ಅದ್ಯಕ್ಷ ನಸೀರ್ ಮಾಡಶೇರಿ ರವರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲಾಯಿತು. ಹಾಗೂ 25ನೇ ಸ್ವಲಾತ್ ವಾರ್ಷಿಕೋತ್ಸವವು ಮಾರ್ಚ್ 1 ಹಾಗೂ 2 ರಂದು ಸುನ್ನಿ ಮುಸ್ಲಿಂ ಜುಮಾ ಮಸೀದಿ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆಗೊಳಿಸಲಾಯಿತುಈ ಸಂರ್ದಭದಲ್ಲಿ ಮಸೀದಿ ಮಾಜಿ ಅದ್ಯಕ್ಷರಾದ ಅಲವಿ ಕುಟ್ಟಿ ಎಂ ಎ, ಕಟ್ಟಡ ನಿರ್ಮಾಣ ಸಮಿತಿ ಅದ್ಯಕ್ಷ ಅಬ್ದುಲ್ ರಹಿಮಾನ್ ಎಸ್ ಪಿ, ಖತೀಬಾರದ ಅಬ್ದುಲ್ ಹಮೀದ್ ಅಂಜದಿ ಕಾಮಿಲ್ ಸಖಾಫಿ, ಸದರ್ ಉಸ್ತಾದ್ ಹಂಸ ಸಅದಿ, ಎನ್ ಐ ಎ ಕಾರ್ಯದರ್ಶಿ ಜುಹೈಲ್ ಹಾಗೂ ಜಮಾಅತ್ ಸದಸ್ಯರು ಹಾಜರಿದ್ದರು.