
ರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಹವೀಕ್ಷಾಳಿಗೆ ಪ್ರಶಸ್ತಿ
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಇದರ ವಿದ್ಯಾರ್ಥಿನಿ ಹವೀಕ್ಷಾ ಯಸ್. ಆರ್. ಅವರು ಪೈವ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಪಂಜಾಬ್ ಇವರು ಆನ್ಲೈನ್ ಮುಖಾ0ತರ ನಡೆಸಿದ ರಾಷ್ಟ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ಅಲ್ಲಿ ಭಾಗವಹಿಸಿ ಬೆಸ್ಟ್ ರಾಷ್ಟ್ರಿಯ ಯೋಗಾಸನ ಪೈವ್ ಸ್ಟಾರ್ ಅವಾರ್ಡ್ ಪಡೆದಿರುತ್ತಾರೆ. ಇವರು ಗುತ್ತಿಗಾರು ಶ್ರೀ ಪದ್ಮ ಹೇರ್ ಡ್ರೆಸ್ಸಸ್ ಮತ್ತು ಪ್ಲವರ್ ಸ್ಟಾಲ್ ಮಾಲಕ ರೋಹಿತಾಕ್ಷ ಹಾಗೂ ಶ್ರೀಲತಾ ದಂಪತಿಗಳ ಪುತ್ರಿ. ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ಇವರಿಂದ ತರಬೇತಿ ಪಡೆದಿರುತ್ತಾರೆ.