- Wednesday
- April 2nd, 2025

ದೇವರಗದ್ದೆ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ. ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ...

ರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಹವೀಕ್ಷಾಳಿಗೆ ಪ್ರಶಸ್ತಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಇದರ ವಿದ್ಯಾರ್ಥಿನಿ ಹವೀಕ್ಷಾ ಯಸ್. ಆರ್. ಅವರು ಪೈವ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಪಂಜಾಬ್ ಇವರು ಆನ್ಲೈನ್ ಮುಖಾ0ತರ ನಡೆಸಿದ ರಾಷ್ಟ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್...

ಒಂದೂವರೆ ವರ್ಷದ ಪಮೋರಿಯನ್ ಹೆಣ್ಣು ನಾಯಿ ನೆಲ್ಲೂರು ಕೇಮ್ರಾಜೆಯ ಕೋಡಿಮಜಲು ಎಂಬಲ್ಲಿಂದ ಕಾಣೆಯಾಗಿದೆ. ನೋಡಿದವರು 9449920971 ಈ ನಂಬರ್ ಗೆ ಮಾಹಿತಿ ನೀಡಿ.

ಮರ್ಕಂಜ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಡಿ.19 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರ್ಕಂಜದಲ್ಲಿ 53 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟವು ನಡೆಯಲಿದೆ ಎಂದು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಿಕೆಯ ಜತೆಗೆ ಒಳ್ಳೆಯ ವ್ಯಕ್ತಿತ್ವ ವಿಕಸನಗೊಳ್ಳಲು ಎನ್ನೆಸ್ಸೆಸ್ ಶಿಬಿರ ಸಹಕಾರಿ ಎಂದು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದರು. ಅವರು ಇಂದು ವಳಲಂಬೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಕೆ.ವಿ.ಜಿ.ಪಾಲಿಟೆಕ್ನಿಕ್ ಸುಳ್ಯ ಇದರ ಸಹಯೋಗದೊಂದಿಗೆ ನಡೆದ ದಕ್ಷಿಣ ಕರ್ನಾಟಕ ವಿಭಾಗೀಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಇಲ್ಲಿನ ಒಳ್ಳೆಯ ಅಂಶಗಳನ್ನು...

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ದಿನಾಂಕ 18-2-2023 ರಂದು ಶನಿವಾರ ಮಹಾ ಶಿವರಾತ್ರಿಯ ದಿನ ಶಿವರಾತ್ರಿ ಗಾನವೈಭವ ಕಾರ್ಯಕ್ರಮವು ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಭಕ್ತಿಗೀತೆ ಗಾನ ವೈಭವ ನಡೆಯಲಿದೆ . ಭಕ್ತಿಯ ಹಾಡು ಹಾಡಲು ಆಸಕ್ತ ಇರುವ ಹಿರಿಯ ಮತ್ತು ಕಿರಿಯ...

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಇಂದು ಸಂಜೆ ಗಂಟೆ 5-00ರಿಂದ ಶತರುದ್ರಾಭಿಷೇಕ, ರಾತ್ರಿ 9-30ಕ್ಕೆ ಮಹಾಪೂಜೆ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಂಜೆ ಗಂಟೆ 6-30ರಿಂದ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಸುರತ್ಕಲ್ ಇವರಿಂದ ಗಿರಿಜಾ ಕಲ್ಯಾಣ-ಕುಮಾರವಿಜಯ ತಾಳಮದ್ದಳೆ ನಡೆಯಲಿದೆ. ರಾತ್ರಿ ಗಂಟೆ 10-00ರಿಂದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ,...

ಪುತ್ತೂರು. ಕರ್ನಾಟಕ ಭಾವೈಕ್ಯತಾ ಪರಿಷತ್ ನೂತನ ಅಧ್ಯಕ್ಷರಾಗಿ ಖ್ಯಾತ ವಾಗ್ಮಿ ಕೆ.ಎಂ.ಇಖ್ಬಾಲ್ ಬಾಳಿಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಎ.ಅಬೂಬಕರ್ ಅನಿಲಕಟ್ಟೆ,ವಿಟ್ಲ ನವೀನ್ ಪಿರೇರ ಸುರತ್ಕಲ್,ಸಂಚಾಲಕರಾಗಿ ಕೆ.ಎ.ಅಬ್ದುಲ್ ಅಝೀಝ್ ಪುಣಚ,ಕೋಶಾಧಿಕಾರಿಯಾಗಿ ಇಖ್ಬಾಲ್ ಕೋಲ್ಪೆ, ಸಹಕಾರ್ಯದರ್ಶಿಗಳಾಗಿ ಸಮ್ಯಕ್ತ್ ಜೈನ್ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಕಡಬ,ಸಂಘಟನಾ ಸಹ ಕಾರ್ಯದರ್ಶಿಯಾಗಿ...

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಇಂದು ಮಹಾಶಿವರಾತ್ರಿ ಉತ್ಸವ ಜರುಗಲಿದ್ದು, ಸಂಜೆ ಗಂಟೆ 6.00ರಿಂದ ಶತರುದ್ರಾಭಿಷೇಕ, ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 7.00ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ "ಶಿವಪಂಚಾಕ್ಷರಿ ಮಹಿಮೆ" ಯಕ್ಷಗಾನ ಬಯಲಾಟ ನಡೆಯಲಿದೆ.

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13ರಂದು ಮೊದಲ್ಗೊಂಡು ಫೆ.17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವೋಪೇತವಾಗಿ ಜರುಗಿತು. ಜಾತ್ರೋತ್ಸವದ ಪ್ರಯುಕ್ತ ಫೆ.13ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ನಡೆಯಿತು. ರಾತ್ರಿ ಧ್ವಜಾರೋಹಣದ ಮೂಲಕ ವಿದ್ಯುಕ್ತವಾಗಿ...

All posts loaded
No more posts