ಕಸಾಪ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಯ್ಕೆ – ಡಾ. ಮುರಳೀಮೋಹನ ಚೂಂತಾರು ಅವರ ಕೃತಿ ಆಯ್ಕೆ
ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ 53ಕೃತಿಗಳ ಆಯ್ಕೆ ಮಾಡಲಾಗಿದೆ. ಸುಳ್ಯದ ಹಿರಿಯ. ಸಾಹಿತಿ ಡಾ.ಚಂದ್ರಶೇಖರ ದಾಮ್ಲೆ, ಲೇಖಕಿ ಸ್ಮಿತಾ ಅಮೃತರಾಜ್ ಸಂಪಾಜೆ ಹಾಗು ಡಾ. ಮುರಳೀಮೋಹನ ಚೂಂತಾರು ಅವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 12 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ
ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ.ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2021ರ ಜನವರಿ ಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಈ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಡಾ.ಚಂದ್ರಶೇಖರ ದಾಮ್ಲೆ ಅವರ ‘ನನ್ನ ಮಗಳು ತುಂಟಿ ಅಲ್ಲಾ’ ಕೃತಿಗೆ ಡಾ.ಎ.ಎಸ್.ಧರಣೇಂದ್ರಯ್ಯ -ಮನೋ ವಿಜ್ಞಾನ ದತ್ತಿ ಪ್ರಶಸ್ತಿ ಲಭಿಸಿದೆ. ಸ್ಮಿತಾ ಅಮೃತ್ರಾಜ್ ಸಂಪಾಜೆ ಅವರ ನೆಲದಾಯ ಪರಿಮಳ ಕೃತಿಗೆ ಗೌರಮ್ಮ ಹರ್ನಳ್ಳಿ ಕೆ ಮಂಜಪ್ಪ ದತ್ತಿ ಪ್ರಶಸ್ತಿಗೆ, ಡಾ.ಮುರಳಿ ಮೋಹನ್ ಚೂಂತಾರು ಅವರ ಸಂಗಾತಿ ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.