Ad Widget

ಗಡಿಕಲ್ಲು : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ಉತ್ಸವ ಸಂಪನ್ನ

ಗಡಿಕಲ್ಲು : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ಉತ್ಸವ ಸಂಪನ್ನ

. . . . . . . . .

ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸೆ.15 ಮತ್ತು ಸೆ.16 ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ ನಡೆಯಿತು. ಸೆ.15 ರಂದು ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ, ಮದ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಙಲ್, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ನಂತರ ಸ್ಥಳೀಯ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ದೈವದ ಕುಲ್ಚಾಟ ನಡೆಯಿತು. ಬಳಿಕ ಗೆಳೆಯರ ಬಳಗ ಗಡಿಕಲ್ಲು ಇವರ ಪ್ರಾಯೋಜಕತ್ವದಲ್ಲಿ ಸ್ಟಾರ್ ವಾಯ್ಸ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ನಡೆಯಿತು. ಫೆ.16 ರಂದು ಬೆಳಿಗ್ಗೆ ಶ್ರೀ ದೈವದ ಅಗ್ನಿ ಪ್ರವೇಶ, ಶ್ರೀ ದೈವದ ಬಾರಣೆ, ಮಾರಿಕಳ, ಗುಳಿಗ ನೇಮ ಹಾಗೂ ಪ್ರಸಾದ ವಿತರಣೆ ನಡೆಯುವುದರೊಂದಿಗೆ ಒತ್ತೆಕೋಲ ಉತ್ಸವ ಸಂಪನ್ನಗೊಂಡಿತು. ಆಡಳಿತ ಮಂಡಳಿ ಅಧ್ಯಕ್ಷರಾದ ದಿನೇಶ್ ಮಡ್ತಿಲ, ಕಾರ್ಯದರ್ಶಿ ನಾರಾಯಣ ಪನ್ನೆ, ಉಪಾಧ್ಯಕ್ಷರುಗಳಾದ ಲವಿತ್ ಪಡ್ಪು, ಸತೀಶ್.ಟಿ.ಎನ್, ಖಜಾಂಜಿ ಅನಂತರಾಮ ಮಣಿಯಾನ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾದ ವೆಂಕಟ್ರಮಣ ಕೊಪ್ಪಡ್ಕ, ಶ್ರೀಮತಿ ಶಾಲಿನಿ ನಾರಾಯಣ ಗಡಿಕಲ್ಲು, ಉಮೇಶ್ ಆಚಾರ್ಯ ಗಡಿಕಲ್ಲು, ಶ್ರೀಮತಿ ಸುಕನ್ಯಾ ಶಂಭಯ್ಯ ಭಟ್ ಕಂಜರ್ಪಣೆ ಗಡಿಕಲ್ಲು, ಗೋಪಾಲ ಗೌಡ ಕೊಪ್ಪಡ್ಕ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಊರ ಭಕ್ತಾದಿಗಳು ಹಾಗೂ ಗೆಳೆಯರ ಬಳಗ ಗಡಿಕಲ್ಲು ಇವರುಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading