ಚಾಲೆಂಜಿಂಗ್ ಸ್ಟಾರ್ ತೂಗುದೀಪ ದರ್ಶನ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಳ್ಯ ತಾಲೂಕು ಅಮರ ಮುಡ್ನೂರು ಗ್ರಾಮದ ಸಂಕೇಶ ಇಲ್ಲಿಯ “ಡಿ ಬಾಸ್ ಗಜಪಡೆ ಸಂಕೇಶ ” ಅಭಿಮಾನಿ ಬಳಗದ ವತಿಯಿಂದ ಕುಕ್ಕುಜಡ್ಕ ಅಂಗನವಾಡಿ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್ ಅನ್ನು ನೀಡಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾದ ಚಂದ್ರಾವತಿ, ಅಂಗನವಾಡಿ ಸಹಾಯಕಿ ನೇತ್ರಾವತಿ ಇವರುಗಳು ಅಭಿಮಾನಿ ಬಳಗದವರೊಂದಿಗೆ ಸಹಕರಿಸಿದರು. ಅಲ್ಲದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಇಲ್ಲಿಯ ಮಕ್ಕಳಿಗೂ ಶಿಕ್ಷಕರ ಸಹಾಭಾಗೀತ್ವದಲ್ಲಿ ಸಿಹಿಯನ್ನು ಹಂಚಿ “ಡಿ ಬಾಸ್”ರವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಮರಮುಡ್ನೂರು ಸಿಬ್ಬಂದಿಗಳಿಗೂ ಈ ಸಂದರ್ಭ ಸಿಹಿ ಹಂಚಲಾಯಿತು.
- Tuesday
- December 3rd, 2024