ಗುತ್ತಿಗಾರು : ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಾಲೇಜಿಗೆ 10 ಕಂಪ್ಯೂಟರ್ ಕೊಡುಗೆ
ರೈಟ್ ಟು ಲಿವ್ ಕೋಟೆ ಫೌಂಡೇಶನ್ ಬೆಂಗಳೂರು ಇವರು ವತಿಯಿಂದ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ನೀಡಿರುವ 10 ಕಂಪ್ಯೂಟರ್ ಹಾಗೂ ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ನ ಹಸ್ತಾಂತರ ಕಾರ್ಯಕ್ರಮ ಇಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಂಪ್ಯೂಟರ್ ಕೊಠಡಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ಉದ್ಘಾಟಿಸಿ, ಸಭಾ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ರೈಟ್ ಟು ಲಿವ್ ಕೋಟೆ ಫೌಂಡೆಶನ್ ಬೆಂಗಳೂರು ಇದರ ಮುಖ್ಯಸ್ಥರಾದ ಸಿ.ಕೆ.ರಮೇಶ್, ಕಾರ್ಯದರ್ಶಿ ವೀರೇಶ್ ಸೊಂಡೆ, ಶ್ರೀಮತಿ ಸ್ನೇಹವೀರೇಶ್ ಸೊಂಡೆ ಹಾಗೂ ಕೋ-ಆರ್ಡಿನೇಟರ್ ಪ್ರದೀಪ್,ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಮಂಜುನಾಥ ಉಂಞನ, ಕಾರ್ಯದರ್ಶಿ ಜಯರಾಮ ಹಾಡಿಕಲ್ಲು, ಸದಸ್ಯರಾದ ಗಿರೀಶ್ ಮಾವಜಿ, ನೇಮಿಚಂದ್ರ ಬಳ್ಳಡ್ಕ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರಾದ ನೆಲ್ಸನ್ ಕ್ಯಾಸ್ಥಿಲಿನೋ, ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಕಾಲೇಜಿಗೆ 10 ಕಂಪ್ಯೂಟರ್ ಹಾಗೂ ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ಕೊಡುಗೆ ನೀಡಿದ ರೈಟ್ ಟು ಲಿವ್ ಮುಖ್ಯಸ್ಥರು, ಕಾರ್ಯದರ್ಶಿ ಹಾಗೂ ಕೋ-ಆರ್ಡಿನೇಟರ್ ಇವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಸಂಸ್ಥೆಯ ಸಮ್ಮಾನ ಸ್ವೀಕರಿಸಿದ ರೈಟ್ ಟು ಲಿವ್ ಮುಖ್ಯಸ್ಥರಾದ ಸಿ.ಕೆ.ರಮೇಶ್ ತಮ್ಮ ಸಂಸ್ಥೆಯ ಧ್ಯೇಯೋದ್ದೇಶದ ಬಗ್ಗೆ ಮಾತಾನಾಡಿದರು. ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ.ಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಂಜಿತ್ ಅಂಬೆಕಲ್ಲು ವಂದಿಸಿ, ಉಪನ್ಯಾಸಕಿ ಶ್ರೀಮತಿ ಜಕೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಸಹಕರಿಸಿದರು.