ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಕೊಡುಗೆ
ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ 10 ಕಂಪ್ಯೂಟರ್, ವೈಫೈ, ಕಂಪ್ಯೂಟರ್ ಟೇಬಲ್ ,ಚಯರ್ , ಇಂಟರ್ನೆಟ್ ವೆಚ್ಚ, ಬೋಧನಾ ಸಿಬ್ಬಂದಿಯ ಗೌರವಧನಕ್ಕಾಗಿ ಅನುದಾನ ಸೇರಿ ರೂ. 6 ಲಕ್ಷ ವೆಚ್ಚದ ಕಂಪ್ಯೂಟರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಫೆ.15 ರಂದು ನಡೆದ ಕಂಪ್ಯೂಟರ್ ಲ್ಯಾಬ್ ನ ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ. ಸಿವಿಲ್ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ವಿಶ್ವನಾಥ ಗೌಡ ಪಿ ಸ್ವಾಗತಿಸಿದರು. ರೈಟ್ ಟು ಲಿವ್ ಇದರ ನಿರ್ದೇಶಕರಾದ ರಮೇಶ್ ಸಿ ಕೆ. ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳಾಗಿ ಗಣಪಯ್ಯ ವನಶ್ರೀ, ರಾಮಕೃಷ್ಣ ಭಟ್ ಕುರುಂಬುಡೇಲು ಇವರು ಶುಭನುಡಿಗಳನ್ನಾಡಿದರು. ಕೋಟೆ ಫೌಂಡೇಶನ್ ನ ಆರ್ಗನೈಸರ್ ವೀರೇಶ್, ಕೋ ಆರ್ಡಿನೇಟರ್ ಪ್ರದೀಪ್ ಉಬರಡ್ಕ , ಸ್ನೇಹಾ ವೀರೇಶ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಉಮಾಕುಮಾರಿ ವಂದಿಸಿದರು. ಶಿಕ್ಷಕರಾದ ರಾಮಚಂದ್ರ ಭಟ್ ಎಂ ಕಾರ್ಯಕ್ರಮ ನಿರೂಪಿಸಿದ ರು. ಸಂಸ್ಥೆಯ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.